ಕೋಲ್ಕತ್ತಾ: ರೋಸ್ ವ್ಯಾಲಿ ಹಗರಣ ಸಂಬಂಧ ರೋಸ್ ವ್ಯಾಲಿ ಗ್ರೂಪ್ ಮುಖ್ಯಸ್ಥ ಗೌತಮ್ ಕುಂಡು ಅವರ ಪತ್ನಿ ಸುಭ್ರಾ ಕುಂಡು ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ.
ರೋಸ್ ವ್ಯಾಲಿ ಕಂಪನಿಯು ಸುಳ್ಳು ಭರವಸೆಗಳನ್ನು ನೀಡಿ, ಆಮಿಷವೊಡ್ಡಿ ದೇಶಾದ್ಯಂತ ಸಾರ್ವಜನಿಕರಿಂದ 17,520 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಪಡೆದು ವಂಚಿಸಿತ್ತು. 2014ರಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ರೋಸ್ ವ್ಯಾಲಿ ಗ್ರೂಪ್ ಮುಖ್ಯಸ್ಥ ಗೌತಮ್ ಕುಂಡು ಸೇರಿ ಇತರರ ವಿರುದ್ಧ ಕೇಸ್ ದಾಖಲಾಗಿತ್ತು. 2015ರಲ್ಲಿ ಕೋಲ್ಕತ್ತಾದಲ್ಲಿ ಗೌತಮ್ ಕುಂಡು ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು.