ಉಡುಪಿ: ಸೀಲ್‌ಡೌನ್ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಪಡುಬಿದ್ರಿ ಇನ್ನಾದಲ್ಲಿರುವ ಗುಜರಾತ್ ಮೂಲದ ಕಂಪನಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಸೀಲ್‌ಡೌನ್ ಉಲ್ಲಂಘನೆ ಆರೋಪ: ಗುಜರಾತ್ ಕಂಪನಿ ವಿರುದ್ಧ ದೂರು ದಾಖಲು - ಗುಜರಾತ್ ಪ್ಲಾಸ್ಟಿಕ್ ಕಂಪನಿ ವಿರುದ್ಧ ದೂರು
ಸೀಲ್‌ಡೌನ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆ ಗುಜರಾತ್ ಮೂಲದ ಕಂಪನಿಯ ವಿರುದ್ಧ ಪ್ರಕರಣ ದಾಖಲಾಗಿದೆ.
Police station
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿರುವ ಗುಜರಾತಿ ಮೂಲದ ಪ್ಲಾಸ್ಟಿಕ್ ಬ್ಯಾಗ್ ತಯಾರಿಸುವ ಕಂಪನಿಯಲ್ಲಿ ಒಟ್ಟು 63 ಮಂದಿ ನೌಕರರಿಗೆ ಕೋವಿಡ್ ಸೋಂಕು ಪತ್ತೆಯಾಗಿತ್ತು. ಪರಿಣಾಮ ಜು. 21 ರಂದು ಸೀಲ್‌ಡೌನ್ ಮಾಡಲಾಗಿತ್ತು. ಆದರೆ, ಕೆಲವರು ಸೀಲ್‌ಡೌನ್ ನಿಯಮ ಉಲ್ಲಂಘಿಸಿ ಬೇರೆಡೆಗೆ ತೆರಳಲು ಕಂಪನಿ ಅವಕಾಶ ನೀಡಿದ್ದ ಹಿನ್ನೆಲೆ ಕಂಪನಿಯ 13 ಮಂದಿ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಕಾರ್ಕಳ ತಾಲೂಕು ಗ್ರಾಮೀಣ ಕೋವಿಡ್-19 ಜಾಗೃತ ದಳದ ಅಧಿಕಾರಿ ದೂರು ನೀಡಿದ್ದಾರೆ.