ಕರ್ನಾಟಕ

karnataka

By

Published : Jan 15, 2021, 3:59 PM IST

ETV Bharat / jagte-raho

ರಾಮ-ಸೀತೆ ಕುರಿತ ವಿವಾದಿತ ಹೇಳಿಕೆ: ಮಮತಾ, ಕಲ್ಯಾಣ್​ ಬ್ಯಾನರ್ಜಿ ವಿರುದ್ಧ ಕೇಸ್​ ದಾಖಲು

ಬಿಹಾರದ ಸೀತಾಮರ್ಹಿ ಸಿವಿಲ್​ ನ್ಯಾಯಾಲಯದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಸಂಸದ ಕಲ್ಯಾಣ್​ ಬ್ಯಾನರ್ಜಿ ವಿರುದ್ಧ ಕೇಸ್​ ದಾಖಲಾಗಿದೆ.

mamata
ಮಮತಾ ಬ್ಯಾನರ್ಜಿ

ಸೀತಾಮರ್ಹಿ (ಬಿಹಾರ): ಶ್ರೀರಾಮ ಹಾಗೂ ಸೀತಾದೇವಿ ಬಗ್ಗೆ ವಿವಾದಾತ್ಮಕ ಹೇಳಿಕೆ ಸಂಬಂಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ)​ ಸಂಸದ ಕಲ್ಯಾಣ್​ ಬ್ಯಾನರ್ಜಿ ವಿರುದ್ಧ ಬಿಹಾರದಲ್ಲಿ ಪ್ರಕರಣ ದಾಖಲಾಗಿದೆ.

ಬಿಹಾರದ ವಕೀಲ ಠಾಕೂರ್​ ಚಂದನ್​ ಸಿಂಗ್​ ಎಂಬವರು, ರಾಮ-ಸೀತೆ ಬಗೆಗಿನ ಹೇಳಿಕೆಗಳಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಸೀತಾಮರ್ಹಿ ಸಿವಿಲ್​ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಈ ಸಂಬಂಧ ಐಪಿಸಿ ಸೆಕ್ಷನ್​ 295 ಎ ಮತ್ತು 120 ಬಿ ಅಡಿಯಲ್ಲಿ ಕೇಸ್​ ದಾಖಲಿಸಿಕೊಳ್ಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಂದನ್​ ಸಿಂಗ್, ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಮುಸ್ಲಿಮರ ಮನವೊಲಿಸಲು ಹಿಂದೂ ಜನರ ಭಾವನೆಗಳಿಗೆ ಧಕ್ಕೆಯುಂಟಾಗುವ ಅಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಹಾರದ ವಕೀಲ ಠಾಕೂರ್​ ಚಂದನ್​ ಸಿಂಗ್​

ಇದನ್ನೂ ಓದಿ: ಸೀತೆಯನ್ನು ಹತ್ರಾಸ್​ ಪ್ರಕರಣಕ್ಕೆ ಹೋಲಿಸಿದ ಟಿಎಂಸಿ ಸಂಸದನ ವಿರುದ್ಧ ಪ್ರಕರಣ

ಕೆಲದಿನಗಳ ಕಲ್ಯಾಣ್​ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಹಿಂದೆ ಸೀತೆಯ ಅಪಹರಣವನ್ನು ಉತ್ತರ ಪ್ರದೇಶದ ಹಥ್ರಾಸ್​​ ಪ್ರಕರಣಕ್ಕೆ ಹೋಲಿಕೆ ಮಾಡಿದ್ದ ಅವರು, ಅದೃಷ್ಟವಶಾತ್​ ಸೀತೆಯನ್ನು ರಾವಣ ಅಪಹರಿಸಿದ್ದನು. ರಾಮನು ಭಕ್ತರು ಎನಿಸಿಕೊಳ್ಳುವ ಬಿಜೆಪಿ ಬೆಂಬಲಿಗರಿಂದ (ಕೇಸರಿ ಭಕ್ತರು) ಅಪಹರಣಕ್ಕೊಳಗಾಗಿದ್ದರೆ ಹಥ್ರಾಸ್​ ಅತ್ಯಾಚಾರ ಸಂತ್ರಸ್ತೆಯ ಪರಿಸ್ಥಿತಿ ಸೀತೆಯದ್ದಾಗಿರುತ್ತಿತ್ತು ಎಂದು ಹೇಳಿದ್ದರು.

ಇದೇ ವಿಚಾರಕ್ಕೆ ಈಗಾಗಲೇ ಬಂಗಾಳದ ಹೌರಾ ಜಿಲ್ಲೆಯ ಗೋಲಾಬರಿ ಪೊಲೀಸ್​ ಠಾಣೆಯಲ್ಲಿ ಕಲ್ಯಾಣ್​ ಬ್ಯಾನರ್ಜಿ ವಿರುದ್ಧ ದೂರು ದಾಖಲಾಗಿದೆ.

ABOUT THE AUTHOR

...view details