ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಬೈಲಹೊಂಗಲ ತಾಲೂಕಿನ ನೇಸರಗಿ ಬಳಿ ನಡೆದಿದೆ.
ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದ ಸಚಿನ್ ಮಾಳಿ(24), ಅಥಣಿ ತಾಲೂಕಿನ ಉಗಾರ್ ಖುರ್ದ್ ಗ್ರಾಮದ ಸಂತೋಷ ಮಾಳವಾಡಿ(22) ಮೃತ ದುರ್ದೈವಿಗಳು. ಕಾರು ಚಲಾಯಿಸುತ್ತಿದ್ದ ಬೈಲಹೊಂಗಲ ತಾಲೂಕಿನ ಹೊಸೂರು ಗ್ರಾಮದ ಪ್ರವೀಣ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.