ಇಂದೋರ್(ಮಧ್ಯಪ್ರದೇಶ): ಇಲ್ಲಿನ ತೇಜಾಜಿ ನಗರ್ನಲ್ಲಿ ಇಂದು ಮುಂಜಾನೆ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಪುಟ್ಟ ಮಗು ಸೇರಿದಂರೆ ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ.
ಕಾರುಗಳ ನಡುವೆ ಭೀಕರ ಅಪಘಾತ... ಪುಟ್ಟ ಮಗು ಸೇರಿ 6 ಮಂದಿ ದುರ್ಮರಣ - ಇಂದೋರ್ನಲ್ಲಿ ಕಾರು ಅಪಘಾತ
ಮಧ್ಯಪ್ರದೇಶದ ತೇಜಾಜಿ ನಗರ್ದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಷಘಟನೆಯಲ್ಲಿ ಐವರು ಗಾಯಗೊಂಡಿದ್ದು, ಎಂ.ವೈ ಆಸ್ಪತ್ರೆ ದಾಖಲು ಮಾಡಲಾಗಿದೆ.
![ಕಾರುಗಳ ನಡುವೆ ಭೀಕರ ಅಪಘಾತ... ಪುಟ್ಟ ಮಗು ಸೇರಿ 6 ಮಂದಿ ದುರ್ಮರಣ](https://etvbharatimages.akamaized.net/etvbharat/prod-images/768-512-4896141-thumbnail-3x2-ks.jpg)
ಭೀಕರ ಅಪಘಾತ
ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಸಾವಿಗೀಡಾದವರಲ್ಲಿ ಕೆಲವರು ಉತ್ತರ ಪ್ರದೇಶವರು ಹಾಗೂ ಇನ್ನುಳಿದವರು ಇಂದೋರ್ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಐವರು ಗಾಯಗೊಂಡಿದ್ದು, ಎಂ.ವೈ ಆಸ್ಪತ್ರೆ ದಾಖಲು ಮಾಡಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆಹಾಕಿದ್ದಾರೆ.