ಶಿವಮೊಗ್ಗ:ಸಾಗರ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿ, ಅದರಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮತದಾನ ಆರಂಭಕ್ಕೂ ಮುನ್ನ ಕರಾಳ ಛಾಯೆ.. ಬಸ್ ಪಲ್ಟಿಯಾಗಿ ತಾಯಿ, ಮಗು ಸೇರಿ ಮೂವರ ದುರ್ಮರಣ - undefined
ಸಾಗರದ ಉಳ್ಳೂರು ಗ್ರಾಮದ ಬಳಿ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮಗು ಸೇರಿ ಮೂವರು ದುರ್ಮರಣಕ್ಕೀಡಾಗಿದ್ದಾರೆ. 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಹೊನ್ನಾವರ ಮೂಲದ ಸುಜಾತಾ (40) ಹಾಗೂ ಮಗಳು ಕೀರ್ತನಾ (12) ಮತ್ತು ಚಿತ್ರದುರ್ಗದ ಮಹಮ್ಮದ್ ಯಾಸಿನ್ ಸ್ಥಳದಲ್ಲೇ ಮೃತಪಟ್ಟವರು.ನಸುಕಿನಲ್ಲಿ ಸಂಭವಿಸಿದ ದುರಂತದಿಂದ ನಿದ್ರೆಯಲ್ಲಿದ್ದ ಪ್ರಯಾಣಿಕರಿಗೆ ಏನಾಗುತ್ತಿದೆ ಎಂಬುದನ್ನು ಅರಿಯುವಷ್ಟರಲ್ಲಿ ಬಸ್ ತಿರುವಿನಲ್ಲಿ ಪಲ್ಟಿಯಾಗಿದ್ದುಮ ಸಣ್ಣ- ಪುಟ್ಟ ಗಾಯಗಳಿಂದ ಸಹಾಯಕ್ಕೆ ಮೊರೆಯಿಟ್ಟರು. ನಸುಕಿನಲ್ಲಿ ಜನಸಂದಣಿ ಇಲ್ಲದೆ ಸಕಾಲದಲ್ಲಿ ಸ್ಥಳೀಯರ ನೆರವು ಸಿಗಲಿಲ್ಲ. ಬೆಳಕು ಹರಿಯುತ್ತಿದ್ದಂತೆ ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. 20ಕ್ಕೂ ಹೆಚ್ಚು ಮಂದಿ ಅಪಘಾತದಲ್ಲಿ ಗಾಯಾಗೊಂಡಿದ್ದು, ಅವರನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.