ಕರ್ನಾಟಕ

karnataka

ETV Bharat / jagte-raho

ಒಂದೇ ಕುಟುಂಬದ 7 ಮಂದಿಗೆ ಗುದ್ದಿದ ಬಸ್​: ಸ್ಥಳದಲ್ಲೇ ನಾಲ್ವರು ಸಾವು - ಪಾಟ್ನಾದ ಗೌರಿಚಕ್ ಪೊಲೀಸ್ ಠಾಣಾ ವ್ಯಾಪ್ತಿ

पटना में बस ड्राइवर की लापरवाही से चार लोगों मौत हो गई. तीन लोगों की हालत गंभीर है. हादसे के बाद गुस्साए लोगों ने आगजनी कर जमकर हंगामा किया. स्थानीय लोग आरोपी की गिरफ्तारी और मुआवजे की मांग कर रहे हैं.

Bus crushed 7 family members in Patna, 4 died
ಒಂದೇ ಕುಟುಂಬದ ನಾಲ್ವರ ದುರ್ಮರಣ

By

Published : Nov 29, 2020, 2:09 PM IST

Updated : Nov 29, 2020, 2:51 PM IST

14:04 November 29

ಬಿಹಾರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಈ ವೇಳೆ ವೇಗವಾಗಿ ಬಂದ ಬಸ್​ ನಿಯಂತ್ರಣ ತಪ್ಪಿ ಆಟೋಗೆ ಗುದ್ದಿದ ಪರಿಣಾಮ ಈ ಅವಘಡ ಸಂಭವಿಸಿದೆ.

ಪಾಟ್ನಾ(ಬಿಹಾರ):ಒಂದೇ ಕುಟುಂಬದ ಏಳು ಜನರಿದ್ದ ಆಟೋಗೆ ಬಸ್​ ಡಿಕ್ಕಿ ಹೊಡೆದು ಇಬ್ಬರು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಪಾಟ್ನಾದ ಗೌರಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ. ಇವರೆಲ್ಲರೂ ಆಟೋದಲ್ಲಿ ದೇವಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್​ ನಿಯಂತ್ರಣ ತಪ್ಪಿ ಆಟೋಗೆ ಗುದ್ದಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  

ಘಟನೆಯಿಂದ ಕೆಂಡಾಮಂಡಲರಾದ ಸ್ಥಳೀಯರು ರಸ್ತೆ ಮೇಲೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Last Updated : Nov 29, 2020, 2:51 PM IST

ABOUT THE AUTHOR

...view details