ವಿಜಯಪುರ: ಸಿಂದಗಿ ತಾಲೂಕಿನ ಯಂಕಂಚಿ ಬಳಿ ಬೈಕ್ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ, ಒರ್ವ ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ.
ಬಸ್-ಬೈಕ್ ನಡುವೆ ಡಿಕ್ಕಿ : ದ್ವಿಚಕ್ರ ವಾಹನದ ಇಬ್ಬರ ದುರ್ಮರಣ - ಯಂಕಂಚಿ ಬೈಕ್ ಮತ್ತು ಬಸ್ ನಡುವೆ ಅಪಘಾತ
ಬೈಕ್-ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿಂದಗಿ ತಾಲೂಕಿನ ಯಂಕಂಚಿ ಬಳಿ ಜರುಗಿದೆ.
ಬಸ್ ಮತ್ತು ಬೈಕ್ ನಡುವೆ ಡಿಕ್ಕಿ
ಸಿಂದಗಿಯಿಂದ ಶಹಾಪೂರ ಕಡೆಗೆ ಹೊರಟಿದ್ದ ಬಸ್ ಹಾಗೂ ಯಂಕಂಚಿಯಿಂದ ಸಿಂದಗಿಯತ್ತ ಹೊರಟಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಯಂಕಂಚಿಯ ರಮೇಶ ಗೌಡಪ್ಪ ಮುಳಸಾವಳಗಿ (35) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬ್ಯಾಕೋಡ ಗ್ರಾಮದ ತಿಪ್ಪಣ್ಣ ಭೈರೋಡಗಿ(30) ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವೀಗಿಡಾಗಿದ್ದಾನೆ. ಇನ್ನೋರ್ವ ಯುವಕ ಶಿವಪ್ಪ ಕುರನಳ್ಳಿ(28) ಗಂಭೀರವಾಗಿ ಗಾಯಗೊಂಡಿದ್ದು ಸಿಂದಗಿ ಆಸ್ಪ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.