ಮೈಸೂರು: ಸ್ವಂತ ತಂಗಿಯ ಮಾಂಗಲ್ಯ ಸರವನ್ನೇ ಕಳ್ಳತನ ಮಾಡಿದ್ದ ಅಣ್ಣನನ್ನು ನಜರ್ ಬಾದ್ ಪೊಲೀಸರು ಬಂಧಿಸಿ, 3.50 ಲಕ್ಷ ಮೌಲ್ಯದ 70 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.
ಸ್ವಂತ ತಂಗಿಯ ಮಾಂಗಲ್ಯ ಸರವನ್ನೇ ಕದ್ದ ಅಣ್ಣನ ಬಂಧನ
ಅಣ್ಣ ಸಂತೋಷ್ ಕುಮಾರ್ ನನ್ನು ಬಂಧಿಸಿ ವಿಚಾರಿಸಿದಾಗ ಮಾಂಗಲ್ಯ ಸರವನ್ನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಈತನಿಂದ 70 ಗ್ರಾಂ ತೂಕದ 3.50 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ..
ಬಂಧಿತನಾದ ಆರೋಪಿ ಸಂತೋಷ ಕುಮಾರ್ (33). ಈತ ತನ್ನ ಸ್ವಂತ ತಂಗಿಯ ಮಾಂಗಲ್ಯ ಸರವನ್ನು ಕದ್ದಿದ್ದು, ಅಣ್ಣ-ತಂಗಿ ಇಬ್ಬರು ಚಾಮರಾಜೇಂದ್ರ ಮೃಗಾಲಯ ಸಮೀಪದ ಬಟ್ಟೆ ಅಂಗಡಿಗೆ ಹೋಗಿದ್ದರು. ನಂತರ ಮನೆಗೆ ಬಂದು ಬ್ಯಾಗ್ ನಲ್ಲಿಟ್ಟಿದ್ದ ಮಾಂಗಲ್ಯ ಸರ ನೋಡಿದಾಗ ಕಳವು ಆಗಿರುವುದು ಗೊತ್ತಾಗಿದೆ.
ಈ ವಿಚಾರವಾಗಿ ತಂಗಿ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವಿಚಾರಣೆ ಕೈಗೊಂಡ ಪೊಲೀಸರಿಗೆ ಬಟ್ಟೆ ಅಂಗಡಿಯಲ್ಲಿ ಬ್ಯಾಗ್ ಅನ್ನು ಅಣ್ಣನಿಗೆ ನೀಡಿರುವ ವಿಚಾರ ತಿಳಿದಿದೆ. ಅಣ್ಣ ಸಂತೋಷ್ ಕುಮಾರ್ ನನ್ನು ಬಂಧಿಸಿ ವಿಚಾರಿಸಿದಾಗ ಮಾಂಗಲ್ಯ ಸರವನ್ನು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಈತನಿಂದ 70 ಗ್ರಾಂ ತೂಕದ 3.50 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.