ಬೆಂಗಳೂರು:ಸ್ಮಾರ್ಟ್ ಫೋನ್ ವ್ಯಾಮೋಹಕ್ಕೆ ಬಿದ್ದು ನಗರದ ಪ್ರತಿಷ್ಠಿತ ಏರಿಯಾಗಳಲ್ಲಿರುವ ಮೊಬೈಲ್ ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಿ ಅನುಮಾನಸ್ಪಾದವಾಗಿ ಓಡಾಡುತ್ತಿದ್ದ ಬಾಲಕ ಕಬ್ಬನ್ ಪಾರ್ಕ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಸ್ಮಾರ್ಟ್ ಫೋನ್ ಕೊಳ್ಳಲು ಕಾಸಿಲ್ಲದೆ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಬಾಲಕ ವಶಕ್ಕೆ
ಇದೇ ತಿಂಗಳು 9 ರಂದು ವಿಠ್ಠಲ್ ಮಲ್ಯ ರಸ್ತೆ, ಲ್ಯಾವೆಲ್ಲೆ ರಸ್ತೆ ಹಾಗೂ ಸೇಂಟ್ ಮಾರ್ಕ್ ರಸ್ತೆಯಲ್ಲಿ ಅಂಗಡಿ ಸೇರಿದಂತೆ ನಾಲ್ಕು ಅಂಗಡಿಗಳ ಗಾಜುಗಳನ್ನು ಹೊಡೆದು ಒಳನುಗ್ಗಿ ಕಳ್ಳತನ ಮಾಡಿದ್ದಾನೆ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳತನ ಮಾಡಿ ಅಂಗಡಿ ಮುಂದೆ ಅನುಮಾಸ್ಪಾದವಾಗಿ ಓಡಾಡುತ್ತಿರುವುದನ್ನು ಕಂಡ ಗಸ್ತು ಪೊಲೀಸರು ಅನುಮಾನಗೊಂಡು ಪ್ರಶ್ನಿಸಿದಾಗ ಕಳ್ಳತನ ಕಥೆ ಬಗ್ಗೆಬಾಯ್ಬಿಟ್ಟಿದ್ದಾನೆ.
ವಿವೇಕ ನಗರ ಠಾಣಾ ವ್ಯಾಪ್ತಿಯ ಏರಿಯಾವೊಂದರಲ್ಲಿ ವಾಸವಾಗಿದ್ದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಿದ್ದಾರೆ. ತಾನು ವಾಸವಾಗಿರುವ ಏರಿಯಾದಲ್ಲಿ ಪರಿಚಿತರಾಗಿದ್ದ ಹುಡುಗರು ಸ್ಮಾರ್ಟ್ ಮೊಬೈಲ್ ಇರುವುದನ್ನು ಕಂಡಿದ್ದಾನೆ. ತನ್ನ ಜೊತೆಯಲ್ಲಿದ್ದವರು ನಿರಂತರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವುದನ್ನು ಕಂಡು ಆರ್ಕಷಿತನಾಗಿದ್ದಾನೆ. ತಾನು ಸಹ ಮೊಬೈಲ್ ತೆಗೆದುಕೊಳ್ಳಬೇಕೆಂಬ ಗೀಳಿಗೆ ಬಿದ್ದಿದ್ದಾನೆ. ಆದರೆ ಮೊಬೈಲ್ ಖರೀದಿಗೆ ಈತನ ಬಳಿ ಹಣವಿರಲಿಲ್ಲ ಹೇಗಾದರೂ ಮಾಡಿ ಮೊಬೈಲ್ ಖರೀದಿಗಾಗಿ ಕಳ್ಳತನದ ಮಾರ್ಗ ಹಿಡಿದಿದ್ದಾನೆ.