ಹುಬ್ಬಳ್ಳಿ:ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಹೋಗಿ ನೀರು ಪಾಲಾಗಿದ್ದ ಬಾಲಕನ ಮೃತದೇಹ ಸುಮಾರು 4 ಗಂಟೆಗಳ ನಂತರ ಸಿಕ್ಕಿದೆ.
ಹುಬ್ಬಳ್ಳಿಯಲ್ಲಿ ನೀರು ಪಾಲಾಗಿದ್ದ ಬಾಲಕನ ಶವ ಪತ್ತೆ - hubli latest crime news
ಹುಬ್ಬಳ್ಳಿಯಲ್ಲಿ ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಹೋಗಿ ನೀರು ಪಾಲಾಗಿದ್ದ ಬಾಲಕನ ಶವ ಪತ್ತೆಯಾಗಿದೆ.
ಹುಬ್ಬಳ್ಳಿಯಲ್ಲಿ ನೀರು ಪಾಲಾಗಿದ್ದ ಬಾಲಕನ ಶವ ಪತ್ತೆ
ಇಂದು ಬೆಳಿಗ್ಗೆ ತಾಲೂಕಿನ ಅಂಚಟಗೇರಿ ಬಳಿಯ ಚನ್ನಾಪುರ ಗ್ರಾಮದ ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಹೋಗಿದ್ದ ಪ್ರಕಾಶ ಗಂಜಿಗಟ್ಟಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಆದರೆ ಅವನ ಮೃತದೇಹ ಮಾತ್ರ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಈಜು ತಜ್ಞರು ಬಾಲಕನ ಮೃತದೇಹಕ್ಕಾಗಿ ಶೋಧ ನಡೆಸಿ ಸಂಜೆ ವೇಳೆಗೆ ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.