ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ! - BJP leader shot dead
09:24 May 21
ಗುಂಡಿಕ್ಕಿ ರಾಮ್ಪುರ್ ಬಿಜೆಪಿ ಮುಖಂಡನ ಹತ್ಯೆ
ಉತ್ತರ ಪ್ರದೇಶ: ರಾಮ್ಪುರ್ ಬಿಜೆಪಿ ಮುಖಂಡರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕೊಟ್ವಾಲಿ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ.
ರಾಮ್ಪುರ್ ಕೌನ್ಸಿಲರ್ ಶಾಲಿನಿ ವರ್ಮಾರ ಪತಿ ಅನುರಾಗ್ ಶರ್ಮಾ ಮೃತಪಟ್ಟ ಉತ್ತರ ಪ್ರದೇಶದ ಬಿಜೆಪಿ ನಾಯಕ. ಕಳೆದ ರಾತ್ರಿ ಜ್ವಾಲಾ ನಗರದಲ್ಲಿರುವ ತಮ್ಮ ಮನೆಗೆ ಅನುರಾಗ್ ಶರ್ಮಾ ಸ್ಕೂಟಿಯಲ್ಲಿ ಹಿಂದಿರುಗುತ್ತಿರುವ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿದ್ದ ಮಾರ್ಗ ಮಧ್ಯೆ ಶರ್ಮಾ ಮೃತಪಟ್ಟಿದ್ದಾರೆ. ಶರ್ಮಾಗೆ ಅಪರಾಧ ಹಿನ್ನೆಲೆಯಿದ್ದು, ಇವರ ವಿರುದ್ಧ ಹಲವು ಕೇಸ್ಗಳು ದಾಖಲಾಗಿದ್ದವು ಎನ್ನಲಾಗಿದೆ. ಘಟನೆ ನಡೆಯುತ್ತಿದ್ದಂತೆಯೇ ಜಿಲ್ಲಾಸ್ಪತ್ರೆಗೆ ನುಗ್ಗಿರುವ ಇವರ ಬೆಂಬಲಿಗರು ಆಸ್ಪತ್ರೆಯನ್ನು ಧ್ವಂಸಗೊಳಿಸಿದ್ದಾರೆ.
ಸ್ಥಳಕ್ಕೆ ಇನ್ಸ್‌ಪೆಕ್ಟರ್ ಜನರಲ್ ರಮಿತ್ ಶರ್ಮಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತನಿಖೆ ಆರಂಭಿಸಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವುದಾಗಿ ರಮಿತ್ ಶರ್ಮಾ ತಿಳಿಸಿದ್ದಾರೆ.