ಕರ್ನಾಟಕ

karnataka

ETV Bharat / jagte-raho

ಬಿಜೆಪಿ ಮುಖಂಡನ ಮೇಲೆ ಬೆತ್ತಗಳಿಂದ ಹಲ್ಲೆ ನಡೆಸಿದ ದುಷ್ಕರ್ಮಿಗಳು - ವಿಡಿಯೋ - ಆಸ್ತಿ ವಿವಾದದಲ್ಲಿ ಬಿಜೆಪಿ ಮುಖಂಡನ ಮೇಲೆ ಹಲ್ಲೆ

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳು ಬಿಜೆಪಿ ಮುಖಂಡನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ರಾಜಸ್ಥಾನದ ಧೋಲ್ಪುರದಲ್ಲಿ ನಡೆದಿದೆ.

BJP leader beaten up by miscreants
ಬಿಜೆಪಿ ಮುಖಂಡನ ಮೇಲೆ ಹಲ್ಲೆ

By

Published : Oct 19, 2020, 1:46 PM IST

Updated : Oct 19, 2020, 2:20 PM IST

ಧೋಲ್ಪುರ (ರಾಜಸ್ಥಾನ):ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿಯ ಸ್ಥಳೀಯ ಮುಖಂಡನಿಗೆ ದುಷ್ಕರ್ಮಿಗಳು ಬೆತ್ತಗಳಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ರಾಜಸ್ಥಾನದ ಧೋಲ್ಪುರದಲ್ಲಿ ನಡೆದಿದೆ.

ಭಾನುವಾರ ಪ್ರಕರಣ ನಡೆದಿದ್ದು, ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಬಳಿಯೇ ಘಟನೆ ನಡೆದಿದ್ದು, ಮುಖ್ಯ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಿಜೆಪಿ ಮುಖಂಡನ ಮೇಲೆ ಹಲ್ಲೆ

ಮುಷ್ತಾಖ್ ಖುರೇಷಿ ಎಂಬ ಬಿಜೆಪಿ ಮುಖಂಡನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಮುಷ್ತಾಖ್ ಅವರು ಝಹುರಾ ಎಂಬ ವ್ಯಕ್ತಿಯೊಂದಿಗೆ ಆಸ್ತಿ ವಿವಾದ ಹೊಂದಿದ್ದರು. ಕೆಲವು ದಿನಗಳ ಹಿಂದೆ ಒಂದು ಕಟ್ಟಡವನ್ನು ಹರಾಜಿನಲ್ಲಿ ಝಹುರಾ ಅವರಿಗೆ ಹೆಚ್ಚಿಗೆ ಬಿಡ್ ಕೂಗಿ ಮುಷ್ತಾಖ್ ಖುರೇಷಿ ಖರೀದಿಸಿದ್ದರು. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆದಿದೆ ಎನ್ನಲಾಗ್ತಿದೆ.

ಈಗ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದು, ಹಲ್ಲೆ ನಡೆಸಿದ ಇನ್ನೂ ಹಲವರನ್ನು ಸೆರೆಹಿಡಿಯಲು ತನಿಖೆ ಮುಂದುವರೆದಿದೆ ಎಂದು ಧೋಲ್ಪುರ ಪೊಲೀಸ್ ವರಿಷ್ಠಾಧಿಕಾರಿ ಕೇಸರ್​​ಸಿಂಗ್​ ಮಾಹಿತಿ ನೀಡಿದ್ದಾರೆ. ಘಟನೆಯ ದೃಶ್ಯಾವಳಿಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಆಧರಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಇದು ರಾಜ್ಯಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಕರೌಲಿ-ಧೋಲ್ಪುರ ಲೋಕಸಭಾ ಕ್ಷೇತ್ರದ ಸದಸ್ಯ ಹಾಗೂ ಬಿಜೆಪಿ ಮುಖಂಡ ಡಾ. ಮನೋಜ್ ರಜೋರಿಯಾ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಗಮನಕ್ಕೆ ತಂದಿದ್ದು, ಸ್ಥಳೀಯ ಪ್ರಾಧಿಕಾರಗಳಿಗೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.

Last Updated : Oct 19, 2020, 2:20 PM IST

ABOUT THE AUTHOR

...view details