ಕರ್ನಾಟಕ

karnataka

ETV Bharat / jagte-raho

ಡಿವೈಡರ್ ಏರಿ ಬಂದು ಬೈಕ್ ಗೆ ಗುದ್ದಿದ ಕಾರು; ಸವಾರ ಸ್ಥಳದಲ್ಲೇ ಸಾವು - accident news

ಕಾರು ಡಿವೈಡರ್ ಏರಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

bike-riders-killed-on-the-spot-as-a-result-of-a-car-collision
ಅಪಘಾತದಲ್ಲಿ ಕಾರು ಜಖಂಗೊಂಡಿರುವುದು

By

Published : Mar 10, 2020, 7:18 PM IST

ಉಡುಪಿ:ಕಾರು ಡಿವೈಡರ್ ಏರಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಮೂಡುಬೆಟ್ಟು ಬಳಿ ನಡೆದಿದೆ.

ಉದ್ಯಾವರ ಕಟ್ಟೆಗುಡ್ಡೆ ನಿವಾಸಿ ಸುಧಾಕರ್ (45) ಮೃತ ದುರ್ದೈವಿ.

ಬೆಳಿಗ್ಗೆ 9.45ರ ಸುಮಾರಿಗೆ ತನ್ನ ಬೈಕ್​​​​ನಲ್ಲಿ ಕಾಪು ಕಡೆ ಹೋಗುತ್ತಿದ್ದಾಗ, ಕಾಪುವಿನಿಂದ ಉಡುಪಿ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​​ ಮೇಲೇರಿದೆ. ಈ ವೇಳೆ ಮತ್ತೊಂದು ಬದಿ ರಸ್ತೆಯಲ್ಲಿ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಕಾರು ಜಖಂಗೊಂಡಿರುವ ದೃಶ್ಯ

ಕಾರು ಸ್ಕೂಟರ್ ಮೇಲೆ ಎರಗುತ್ತಿದ್ದಂತೆ ಸುಧಾಕರ್ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸುಧಾಕರ್ ಪೈಂಟಿಂಗ್ ಕಾಂಟ್ರಾಕ್ಟರ್ ವೃತ್ತಿ ಮಾಡುತ್ತಿದ್ದರು. ಮೃತರು 8 ತಿಂಗಳಿನ ಮಗು ಮತ್ತು ಪತ್ನಿಯನ್ನು ಅಗಲಿದ್ದಾರೆ. ಕಾಪು ಎಸ್ಸೈ ರಾಜಶೇಖರ ಬಿ. ಸಾಗನೂರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details