ಮೈಸೂರು: ಸಿಗ್ನಲ್ ದಾಟುವಾಗ ಗೂಡ್ಸ್ ಆಟೋದ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಮಹಾರಾಣಿ ಕಾಲೇಜಿನ ಸಿಗ್ನಲ್ನಲ್ಲಿ ನಡೆದಿದೆ. ಮೃತ ವ್ಯಕ್ತಿಯ ಹೆಸರು ವಿಳಾಸ ತಿಳಿದು ಬಂದಿಲ್ಲ.
ಸಿಗ್ನಲ್ ಜಂಪ್ಗೆ ಯತ್ನಿಸಿದ ಬೈಕ್ ಸವಾರ ಸಾವು - undefined
ಸಿಗ್ನಲ್ ಜಂಪ್ ಮಾಡುವಾಗ ಗೂಡ್ಸ್ ಆಟೋದ ಚಕ್ರಕ್ಕೆ ಸಿಲುಕಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ.
![ಸಿಗ್ನಲ್ ಜಂಪ್ಗೆ ಯತ್ನಿಸಿದ ಬೈಕ್ ಸವಾರ ಸಾವು](https://etvbharatimages.akamaized.net/etvbharat/prod-images/768-512-3781815-thumbnail-3x2-accident.jpg)
ACCIDENT
ಚಕ್ರದಡಿ ಸಿಲುಕಿದ ಮೃತದೇಹವನ್ನು ಹೊರ ತೆಗೆದ ಪೊಲೀಸರು.
ಮಹಾರಾಣಿ ಕಾಲೇಜು ಹಾಗೂ ದೇವರಾಜ ಅರಸು ರಸ್ತೆಯ ಕಾಫಿ ಡೇ ಸಿಗ್ನಲ್ನಲ್ಲಿ ಸಿಗ್ನಲ್ ಜಂಪ್ ಮಾಡುವ ಸಂದರ್ಭದಲ್ಲಿ ಬೈಕ್ ಸವಾರ ವೇಗವಾಗಿ ಮುನ್ನುಗ್ಗಲು ಯತ್ನಿಸಿದ್ದಾನೆ. ಆಗ ಆಯತಪ್ಪಿ ಗೂಡ್ಸ್ ಆಟೋದ ಹಿಂಬದಿ ಚಕ್ರಕ್ಕೆ ಸಿಲುಕಿದ್ದಾನೆ. ಸ್ಥಳಕ್ಕೆ ಆಗಮಿಸಿದ ದೇವರಾಜ ಸಂಚಾರಿ ಠಾಣೆಯ ಪೊಲೀಸರು, ಮೃತದೇಹವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ.