ರಾಯಚೂರು: ಲಿಂಗಸೂಗೂರು ತಾಲೂಕಿನ ಮುದಗಲ್ ಡೈಮಂಡ್ ಡಾಬಾ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಬೈಕ್-ಲಾರಿ ಮಧ್ಯೆ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು - ಓರ್ವ ಸಾವು
ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮಂಜುನಾಥ(28), ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಈತ ಕನಕಗಿರಿ ನಿವಾಸಿಯಾಗಿದ್ದಾನೆ.

ಮೃತ ಬೈಕ್ ಸವಾರ ಮಂಜುನಾಥ
ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮಂಜುನಾಥ(28), ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಈತ ಕನಕಗಿರಿ ನಿವಾಸಿಯಾಗಿದ್ದಾನೆ.
ಲಿಂಗಸೂಗೂರು ಅಂಬೇಡ್ಕರ್ ವಸತಿ ನಿಲಯದಲ್ಲಿ ಅಡುಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಈತ, ಜಾತ್ರಾ ನಿಮಿತ್ಯವಾಗಿ ಕನಕಗಿರಿಗೆ ತೆರಳುತ್ತಿದ್ದ ಎನ್ನಲಾಗಿದೆ. ದೇವರ ದರ್ಶನಕ್ಕೆಂದು ತೆರಳಿದ್ದ ಮಂಜುನಾಥ ಈಗ ದೇವರ ಪಾದ ಸೇರಿರುವುದು ದುರ್ದೈವದ ಸಂಗತಿ. ಘಟನೆಗೆ ಸಂಬಂಧಿಸಿದಂತೆ ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Mar 29, 2019, 1:55 PM IST