ಹುಬ್ಬಳ್ಳಿ: ಪಾದಚಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರನೋರ್ವ ಪರಾರಿಯಾಗಿದ್ದು, ಘಟನೆಯಲ್ಲಿ ಪಾದಚಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಲ್ಲಿನ ಉಣಕಲ್ ಜನನಿ ಕಾರ್ ಡೆಕೋರ್ ಎದುರು ಈ ಘಟನೆ ನಡೆದಿದೆ.
ಪಾದಚಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಪರಾರಿ - ಗಂಭೀರ ಗಾಯಗೊಂಡ ಪಾದಚಾರಿ
ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
![ಪಾದಚಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಪರಾರಿ Bike rider collides with pedestrian](https://etvbharatimages.akamaized.net/etvbharat/prod-images/768-512-5957133-thumbnail-3x2-sana.jpg)
ಪಾದಚಾರಿಗೆ ಬೈಕ್ ಡಿಕ್ಕಿ
ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ತಲೆಗೆ ಗಂಭೀರ ಗಾಯವಾಗಿದ್ದು, ಗಾಯಾಳುವನ್ನು ಧಾರವಾಡ ಮೂಲದ ಪವನ್ ನಂದ್ಯಾಳ ಎಂದು ಗುರುತಿಸಲಾಗಿದೆ.
ಪಾದಚಾರಿಗೆ ಬೈಕ್ ಡಿಕ್ಕಿ
ಪವನ್ ಉಣಕಲದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿಯಾಗಲು ಬಂದಿದ್ದರು ಎಂದು ತಿಳಿದು ಬಂದಿದೆ. ಅಪಘಾತವಾಗುತ್ತಿದ್ದಂತೆ ಘಟನಾ ಸ್ಥಳದಿಂದ ಬೈಕ್ ಸವಾರ ಪರಾರಿಯಾಗಿದ್ದು, ಸ್ಥಳದ್ದಲ್ಲಿದ್ದ ಕಾರ್ ಡೆಕೋರ್ ಮಾಲೀಕ ವಿಜಯ ಗಾಯಾಳುವನ್ನು ಉಪಚರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಸಂಬಂಧ ಇಲ್ಲಿಯವರೆಗೂ ಯಾವುದೇ ದೂರು ದಾಖಲಾಗಿಲ್ಲ.