ಕರ್ನಾಟಕ

karnataka

ETV Bharat / jagte-raho

ಕೊಪ್ಪಳದಲ್ಲಿ ಕಾರು ಡಿಕ್ಕಿ: ಬೈಕ್​ ಸವಾರರಿಬ್ಬರಿಗೆ ಗಂಭೀರ ಗಾಯ - ಕುಷ್ಟಗಿಯಲ್ಲಿ ಅಪಘಾತ, ಬೈಕ್ ಸವಾರರಿಗೆ ಗಾಯ

ಕೊಪ್ಪಳ ಬಿ.ಟಿ. ಪಾಟೀಲ್ ನಗರದಲ್ಲಿ ತಡರಾತ್ರಿ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

bike met an accident in koppal at kustagi
ಬೈಕ್​​​ಗೆ ಕಾರು ಡಿಕ್ಕಿ ಸವಾರರಿಗೆ ಗಾಯ

By

Published : Dec 30, 2019, 10:42 AM IST

ಕೊಪ್ಪಳ:ಇಲ್ಲಿನ ಕುಷ್ಟಗಿ ರಸ್ತೆಯ ಬಿ.ಟಿ. ಪಾಟೀಲ್ ನಗರದಲ್ಲಿ ತಡರಾತ್ರಿ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರು ಡಿಕ್ಕಿಯಾಗಿ ಬೈಕ್​ ಸವಾರರಿಬ್ಬರಿಗೆ ಗಾಯ

ಸೋಮು ಹಾಗೂ ಕಾರ್ತಿಕ್​​ ಗಾಯಗೊಂಡವರು. ಈ ಪೈಕಿ ಸೋಮು ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಬೈಕ್​ಗೆ ಡಿಕ್ಕಿ ಹೊಡೆದು ಬಳಿಕ ಕಾರು ರಸ್ತೆ ವಿಭಜಕದ ಮೇಲೆ ಹತ್ತಿದೆ.

ಕೊಪ್ಪಳದಿಂದ ಬೇವೂರು ಗ್ರಾಮಕ್ಕೆ ಹೊರಟಿದ್ದ ಕಾರು ಏಕಾಏಕಿ ಬೈಕ್ ಸೈಡ್​​​ ತೆಗೆದುಕೊಂಡ ಹಿನ್ನೆಲೆಯಲ್ಲಿ ಅಪಘಾತ ನಡೆದಿದೆ ಎನ್ನಲಾಗಿದೆ. ಕಾರು ಚಾಲಕ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details