ಗುರುಮಠಕಲ್ : ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ಪಟ್ಟಣ ಸಮೀಪದ ಇಟಕಲ್ ಕ್ರಾಸ್ ಬಳಿ ನಡೆದಿದೆ.
ಬೈಕ್ಗೆ ಲಾರಿ ಡಿಕ್ಕಿ; ಸವಾರ ಸಾವು.. ಇಬ್ಬರಿಗೆ ಗಾಯ - ಗುರುಮಠಕಲ್ ಬೈಕ್ ಅಪಘಾತ ಸುದ್ದಿ
ಹೊಲದಲ್ಲಿ ಕೆಲಸ ಮುಗಿಸಿಕೊಂಡು ಹೆಂಡತಿ ಮಗಳ ಜೊತೆ ಬರುತ್ತಿದ್ದ ರೈತನ ಬೈಕಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ರೈತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪತ್ನಿ ಹಾಗೂ ಮಗಳಿಗೆ ಗಂಭೀರ ಗಾಯವಾದ ಘಟನೆ ಗುರುಮಠಕಲ್ ಬಳಿ ನಡೆದಿದೆ.
ಬೈಕ್ಗೆ ಲಾರಿ ಡಿಕ್ಕಿ
ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಪತ್ನಿ ಹಾಗೂ ಮಗಳ ಜೊತೆ ಬರುತ್ತಿದ್ದ ರೈತ ಸಾಬಣ್ಣ ಪೂಚಾರಿ (41) ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಹಿಂಬದಿ ಕುಳಿತ ಪತ್ನಿ ಹಾಗೂ ಮಗಳಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಲಾರಿ ಚಾಲಕ ಪರಾರಿಯಾಗಿದ್ದಾನೆ. ಪ್ರಕರಣ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.