ಬೀದರ್:ಬಳ್ಳಾರಿ ಮೂಲದ ಉದ್ಯಮಿಯೊಬ್ಬರ ಕಾರು ಚಾಲಕ ಎರಡು ವರ್ಷಗಳ ಹಿಂದೆ 70 ಲಕ್ಷ ರೂ. ನಗದು ಹಾಗೂ ಒಂದು ಕಾರಿನ ಸಮೇತ ಪರಾರಿಯಾಗಿದ್ದ ಪ್ರಕರಣ ಭೇದಿಸಿದ ಬೀದರ್ ಪೊಲೀಸರು, ತಲೆಮರೆಸಿಕೊಂಡಿದ್ದ ವಂಚಕನನ್ನು ಪತ್ತೆ ಹಚ್ಚಿ ನಗದು ಹಣ ಜಪ್ತಿ ಮಾಡಿಕೊಂಡು ವ್ಯಾಪಾರಿಗೆ ವಾಪಸ್ ನೀಡಿದ್ದಾರೆ.
ಜಿಲ್ಲೆಯ ಚಿಟಗುಪ್ಪ ತಾಲೂಕಿನ ಮನ್ನಾಖೆಳ್ಳಿ ಗ್ರಾಮದಲ್ಲಿ 2018ರಲ್ಲಿ ಬಿತ್ತನೆ ಬೀಜ ಮಾರಾಟ ಮಾಡಿದ್ದ 70 ಲಕ್ಷ ರೂ. ನಗದು ತೆಗೆದುಕೊಂಡು ಬಳ್ಳಾರಿ ಮೂಲದ ರಾಜೇಶ್ವರ ಬೆಳ್ಳಕ್ಕಿ ಎಂಬುವರು ಕೃಷಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಇವರ ಕಾರು ಚಾಲಕ ಮಾರುತಿ ಸುಧಾ ಎಂಬಾತ ಕಾರಿನಲ್ಲಿದ್ದ ಹಣದ ಸಮೇತ ಪರಾರಿಯಾಗಿದ್ದ. ನಂತರ ತೆಲಂಗಾಣದ ಹಳ್ಳಿಯೊಂದರಲ್ಲಿ ತಲೆಮರೆಸಿಕೊಂಡಿದ್ದ.