ಕರ್ನಾಟಕ

karnataka

ETV Bharat / jagte-raho

ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಭಾಲ್ಕಿ ಪೊಲೀಸ್ - ಭಾಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಭಾಲ್ಕಿ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಕೊಂಡಿದ್ದಾರೆ.

Bhalaki police arrested thieves
Bhalaki police arrested thieves

By

Published : Aug 8, 2020, 5:45 PM IST

ಬೀದರ್:ಹಗಲು ಹೊತ್ತಿನಲ್ಲಿ ಮನೆಗಳ್ಳತನ ಮಾಡಿದ ಇಬ್ಬರು ನಟೋರಿಯಸ್ ಕಳ್ಳರನ್ನು ಬಂಧಿಸುವಲ್ಲಿ ಭಾಲ್ಕಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪರಶುರಾಮ್ ವಾಡೇಕರ್ ಹಾಗೂ ಅಂಕುಶ ಲಸ್ಕರೆ ಬಂಧಿತ ಆರೋಪಿಗಳು. ಬಂಧಿತರಿಂದ 1,57,100 ಮೌಲ್ಯದ 270 ಗ್ರಾಂ ಚಿನ್ನ ಹಾಗೂ ಅರ್ಧ ಕೆ.ಜಿ ಬೆಳ್ಳಿ, 10 ಸಾವಿರ ನಗದು ಜಪ್ತಿಮಾಡಲಾಗಿದೆ.

ಈ ಕುರಿತು ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details