ಬೆಂಗಳೂರು: ರಸ್ತೆ ತಿರುವಿನ ಫುಟ್ಪಾತ್ ಮೇಲೆ ನಿಂತಿದ್ದ ವೃದ್ಧನಿಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ವೃದ್ಧ ಸಾವನ್ನಪ್ಪಿರುವ ಘಟನೆ ಹನುಮಂತನಗರದ ಗಣೇಶ್ ಭವನ್ ಹೊಟೇಲ್ ಬಳಿ ನಡೆದಿದೆ.
ಡ್ರಿಂಕ್ ಆ್ಯಂಡ್ ಡ್ರೈವ್: ಬೆಂಗಳೂರಲ್ಲಿ ವೃದ್ಧನ ಪ್ರಾಣ ತೆಗೆದ ಟಿಪ್ಪರ್ ಚಾಲಕ - ವೃದ್ಧನಿಗೆ ಡಿಕ್ಕಿ ಹೊಡೆದ ಟಿಪ್ಪರ್
ರಸ್ತೆ ತಿರುವಿನ ಫುಟ್ಪಾತ್ ಮೇಲೆ ನಿಂತಿದ್ದ ವೃದ್ಧನಿಗೆ ಟಿಪ್ಪರ್ ಡಿಕ್ಕಿಯಾದ ಸ್ಥಳದಲ್ಲೇ ವೃದ್ಧ ಸಾವನ್ನಪ್ಪಿರುವ ಘಟನೆ ಹನುಮಂತನಗರದ ಗಣೇಶ್ ಭವನ್ ಹೊಟೇಲ್ ಬಳಿ ನಡೆದಿದೆ.
ಬೆಂಗಳೂರು ರಸ್ತೆ ಅಪಘಾತ
ಮೃತರು 80 ವರ್ಷದವರಾಗಿದ್ದು, ಯಾವುದೇ ಗುರುತು ಪತ್ತೆಯಾಗಿಲ್ಲ. ಈ ಹಿನ್ನೆಲೆ ಬಸವನಗುಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು, ಘಟನೆ ನಡೆದ ತಕ್ಷಣ ಟಿಪ್ಪರ್ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆತ ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.