ಬೆಂಗಳೂರು: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ರಾಜ್ಯ ಪೊಲೀಸರು ಆಫ್ರಿಕಾದ ಸೆನಗಲ್ ದೇಶದಿಂದ ಭಾನುವಾರ ತಡರಾತ್ರಿ ಬೆಂಗಳೂರಿಗೆ ಕರೆ ತಂದಿದ್ದಾರೆ.
ಸುಮಾರು 15 ವರ್ಷಗಳಿಂದ ರವಿ ಪೂಜಾರಿಗಾಗಿ ರಾಜ್ಯ ಪೊಲೀಸರ ಜೊತೆಗೆ ಎನ್ಐಎ, ರಾ ಹಾಗೂ ಕೇಂದ್ರ ತನಿಖಾ ತಂಡಗಳು ಹುಡುಕಾಟ ನಡೆಸುತ್ತಿದ್ದವು. ರವಿ ಪೂಜಾರಿ ವಿರುದ್ಧ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ 49 ಕೇಸ್ಗಳು ದಾಖಲಾಗಿವೆ. ಈತ 20 ವರ್ಷಗಳ ಹಿಂದೆಯೇ ಭಾರತದಿಂದ ಪರಾರಿಯಾಗಿದ್ದ. ಕಳೆದ ವರ್ಷ ಜ.19ರಂದು ಪೂಜಾರಿಯನ್ನು ಸೆನೆಗಲ್ ಪೊಲೀಸರು ಸೆರೆಹಿಡಿದಿದ್ದರು.ಸದ್ಯ ರವಿ ಪೂಜಾರಿ ರಾಜ್ಯ ಪೊಲೀಸರ ವಶದಲ್ಲಿದ್ದು, ಬೆಂಗಳೂರಿನ ಮಡಿವಾಳದ ಇಂಟರಗೇಷನ್ ಸೆಂಟರ್ಗೆ ಕರೆದೊಯ್ಯಲಾಗಿದೆ.