ಕರ್ನಾಟಕ

karnataka

ETV Bharat / jagte-raho

ಬೆಳ್ತಂಗಡಿಯಲ್ಲಿ ಬೈಕ್ ಕಳ್ಳವು: ಐದು ಮಂದಿ ಆರೋಪಿಗಳ ಬಂಧನ - ಬೈಕ್ ಕಳ್ಳತನ

ಬೆಳ್ತಂಗಡಿ ಸಬ್ ಇನ್ಸ್​ಪೆಕ್ಟರ್ ಎಂ.ಎಂ. ನಂದ ಕುಮಾರ್ ಮತ್ತು ಸಿಬ್ಬಂದಿ ಗುರುವಾಯನಕೆರೆ ಹೆದ್ದಾರಿಯ ಜೈನ್ ಪೇಟೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಎರಡು ಬೈಕ್​ಗಳಲ್ಲಿ ಬಂದ ಮೂವರನ್ನು ತಡೆದು ನಿಲ್ಲಿಸಿ ಪರಿಶೀಲಿಸಲಾಯಿತು. ಬೆಳ್ತಂಗಡಿ ಎಸ್​ಡಿಎಂ ಕಲಾ ಭವನದ ಮುಂಭಾಗದ ಮನೆ ಮತ್ತು ಮೂಡಬಿದಿರೆ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ್ದರು ಎಂಬುದು ತೀವ್ರ ವಿಚಾರಣೆಯ ಬಳಿಕ ತಿಳಿದುಬಂತು.

Beltangadi
ಬೆಳ್ತಂಗಡಿ

By

Published : Jul 5, 2020, 5:15 AM IST

Updated : Jul 5, 2020, 7:31 AM IST

ಬೆಳ್ತಂಗಡಿ: ಬೆಳ್ತಂಗಡಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಬೈಕ್ ಕಳವು ಪ್ರಕರಣಗಳ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಬೆಳ್ತಂಗಡಿ ಸಬ್ ಇನ್ಸ್​ಪೆಕ್ಟರ್ ಎಂ.ಎಂ. ನಂದ ಕುಮಾರ್ ಮತ್ತು ಸಿಬ್ಬಂದಿ ಗುರುವಾಯನಕೆರೆ ಹೆದ್ದಾರಿಯ ಜೈನ್ ಪೇಟೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದರು. ಎರಡು ಬೈಕ್​ಗಳಲ್ಲಿ ಬಂದ ಮೂವರನ್ನು ತಡೆದು ನಿಲ್ಲಿಸಿ ಪರಿಶೀಲಿಸಲಾಯಿತು. ಬೆಳ್ತಂಗಡಿ ಎಸ್​ಡಿಎಂ ಕಲಾ ಭವನದ ಮುಂಭಾಗದ ಮನೆ ಮತ್ತು ಮೂಡಬಿದಿರೆ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ್ದರು ಎಂಬುದು ತೀವ್ರ ವಿಚಾರಣೆಯ ಬಳಿಕ ತಿಳಿದುಬಂತು.

ವಿಚಾರಣೆ ವೇಳೆ ಉಜಿರೆ ಕುಂಟಿನಿಯ ಇನ್ನಿಬ್ಬರು ಕೃತ್ಯಗಳಲ್ಲಿ ಭಾಗಿ ಆಗಿದ್ದಾರೆ ಎಂದು ಆರೋಪಿಗಳು ಮಾಹಿತಿ ನೀಡಿದರು. ಕಾರ್ಯಾಚರಣೆಗೆ ಇಳಿದ ಪೊಲೀಸರು ಮತ್ತೆರಡು ಬೈಕ್​ಗಳನ್ನು ವಶಕ್ಕೆ ಪಡೆದರು. ವಿಜಯ ಯಾನೆ ಆಂಜನೇಯ (23), ಪ್ರದೀಪ್ (27 ), ಕೆಕೆ ಸುದೀಶ್ (20), ಪುಟ್ಟ (21) ಮತ್ತು ನಿತಿನ್ ಕುಮಾರ್ ( 22) ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ 4 ಬೈಕ್, ಒಂದು ಒಮಿನಿ ಕಾರು ಪಡೆದು, ಆಪಾದಿತರನ್ನು ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

Last Updated : Jul 5, 2020, 7:31 AM IST

ABOUT THE AUTHOR

...view details