ಬಳ್ಳಾರಿ: ಗಿಫ್ಟ್ ನೀಡುವ ನೆಪದಲ್ಲಿ ಕರೆಮಾಡಿ ಆನ್‌ಲೈನ್‌ನಲ್ಲಿ 40 ಸಾವಿರ ರೂಪಾಯಿ ವಂಚನೆ ಮಾಡಿದ ಘಟನೆ ಗಣಿನಾಡು ಬಳ್ಳಾರಿ ನಗರದಲ್ಲಿ ನಡೆದಿದೆ.
ಆನ್‌ಲೈನ್ ವಂಚನೆ: ಉಡುಗೊರೆಗೆ ಆಸೆ ಬಿದ್ದು ₹40 ಸಾವಿರ ಕಳೆದುಕೊಂಡ ವ್ಯಕ್ತಿ.. - Online fraud news
ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗುವವರ ಪೂರ್ವಾಪರ ತಿಳಿದುಕೊಳ್ಳದೇ ಸ್ನೇಹ ಇಲ್ಲವೇ ಯಾವುದೇ ರೀತಿಯ ವ್ಯವಹಾರ ಇರಿಸಿಕೊಂಡ್ರೆ ಮಕ್ಮಲ್ ಟೋಪಿ ಬೀಳೋದು ಗ್ಯಾರಂಟಿ. ಅದ್ಹೇಗೆ ಅಂತಾ ಇಲ್ನೋಡಿ..
ನಗರದ ನೆಹರು ಕಾಲೋನಿಯ ನಿವಾಸಿ ಗೋಪಿಕೃಷ್ಣ ಅವರಿಗೆ ಅಪರಿಚಿತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಬಳಿಕ ಉಡುಗೊರೆ ಕಳಿಸುತ್ತೇನೆ ಎಂದು ಜನವರಿ 6 ರಂದು ಸಂದೇಶ ಕಳಿಸಿದ್ದರು. ಮರುದಿನ ಮತ್ತೊಬ್ಬ ವ್ಯಕ್ತಿ ಅಧಿಕಾರಿ ನೆಪದಲ್ಲಿ ಕರೆ ಮಾಡಿದ್ದಾರೆ. ನಿಮ್ಮ ಹೆಸರಿನಲ್ಲಿ ಉಡುಗೊರೆ ಬಂದಿದೆ, ನಿಮ್ಮ ಮನೆಗೆ ತಲುಪಿಸಲು ₹40 ಸಾವಿರ ತೆರಿಗೆ ಪಾವತಿಸಬೇಕು ಎಂದಿದ್ದರು. ಇದರಿಂದಾಗಿ ಉಡುಗೊರೆಗೆ ಆಸೆ ಬಿದ್ದು ಗೋಪಿಕೃಷ್ಣ ಆನ್‌ಲೈನ್‌ನಲ್ಲಿ ₹40 ಸಾವಿರ ಹಣ ಪಾವತಿ ಮಾಡಿದ್ದಾರೆ.
ಕೆಲವು ದಿನಗಳ ನಂತರ ಯಾವುದೇ ಉಡುಗೊರೆ ಬಂದಿಲ್ಲ. ತಾವು ಮೋಸ ಹೋಗಿರುವುದು ಖಚಿತವಾದ ಬಳಿಕ ಬಳ್ಳಾರಿ ನಗರದ ಸೈಬರ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.