ಕರ್ನಾಟಕ

karnataka

ETV Bharat / jagte-raho

ಅನೈತಿಕ ಸಂಬಂಧ ಶಂಕೆ: ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿರಾಯ...

ಹೆಂಡತಿಯನ್ನು ಕೊಲೆ ಮಾಡಿದ ನಂತರ ಅನೈತಿಕ ಸಂಬಂಧದ ಶಂಕೆಯಿಂದ ಕಾಯಿಗಡ್ಡೆ ರಾಜ ಎಂಬುವರ ಮನೆಗೆ ತೆರಳಿ, ಮಚ್ಚಿನಿಂದ ಹೊಡೆದಿದ್ದಾನೆ.

bellary husband murder her wife news
ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ

By

Published : Nov 21, 2020, 4:27 PM IST

ಬಳ್ಳಾರಿ: ಅನೈತಿಕ ಸಂಬಂಧದ ಶಂಕೆಯಿಂದ ಪತಿಯೊಬ್ಬ ತನ್ನ ಪತ್ನಿಯನ್ನೇ ಮಚ್ಚಿನಿಂದ ಕೊಚ್ಚಿ ಕೊಂದಿರುವ ಘಟನೆ ಕಂಪ್ಲಿ ತಾಲೂಕಿನ ಕೋಟೆಯ ದ್ಯಾವಮ್ಮ ಗುಡಿ ಪ್ರದೇಶ ಬಳಿ ನಡೆದಿದೆ.

ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ

ಹೇಮಾವತಿ (30) ಮೃತಪಟ್ಟ ದುರ್ದೈವಿ, ಪತಿ ದುರುಗಪ್ಪ(38) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.

ಹೆಂಡತಿಯನ್ನು ಕೊಲೆ ಮಾಡಿದ ನಂತರ ಅನೈತಿಕ ಸಂಬಂಧದ ಶಂಕೆಯಿಂದ ಕಾಯಿಗಡ್ಡೆ ರಾಜ ಎಂಬುವರ ಮನೆಗೆ ತೆರಳಿ, ಮಚ್ಚಿನಿಂದ ಹೊಡೆದಿದ್ದಾನೆ. ಗಾಯಗೊಂಡ ರಾಜ ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳಕ್ಕೆ ಹಂಪಿ ಡಿವೈಎಸ್ಪಿ ಎಸ್​​ಎಸ್.ಕಾಶಿ, ಸಿಪಿಐ ಸುರೇಶ್ ಹೆಚ್.ತಳವಾರ್, ಪಿಎಸ್ಐ ಮೌನೇಶ್ ಯು.ರಾಥೋಡ್ ಭೇಟಿ ನೀಡಿ ಪರಿಶೀಲಿಸಿದರು.

ಘಟನೆ ವಿವರ:

ಶುಕ್ರವಾರ ರಾತ್ರಿ 11.30 ಸುಮಾರಿಗೆ ಆರೋಪಿ ಪತಿ, ತನ್ನ ಪತ್ನಿಯ ತಲೆ ಮತ್ತು ಕತ್ತಿಗೆ ಮನಬಂದಂತೆ ಮಚ್ಚಿನಿಂದ ಕೊಚ್ಚಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ.

ABOUT THE AUTHOR

...view details