ಕರ್ನಾಟಕ

karnataka

ETV Bharat / jagte-raho

ಪ್ರೇಮ ವೈಫಲ್ಯ: ರೈಲಿಗೆ ತಲೆಕೊಟ್ಟು ಆತ್ಯಹತ್ಯೆಗೆ ಶರಣಾದ ಬೆಳಗಾವಿ ಯುವಕ - ಪ್ರೇಮ್​ ವೈಪಲ್ಯ ಯುವಕ ಸಾವು

ಪ್ರೀತಿಸಿದ ಹುಡುಗಿ ಪ್ರೇಮ ನಿರಾಕರಿಸಿದ ಕಾರಣ ಯುವಕನೋರ್ವ ಮನನೊಂದು ರೈಲ್ವೆ ಹಳಿಗೆ ತಲೆಕೊಟ್ಟು ಸಾವಿಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

belagavi-lock-failure-boy-commits-suicide
ಬೆಳಗಾವಿ ಯುವಕ

By

Published : Jul 31, 2020, 9:26 PM IST

ಬೆಳಗಾವಿ: ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದ ಯುವಕನೋರ್ವ ಗೂಡ್ಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಅನಗೋಳ ಸಮೀಪ ನಡೆದಿದೆ.

ತಾಲೂಕಿನ ಕಣಬರ್ಗಿ ಗ್ರಾಮದ ಶರತ್ ಕಾಟೆ (27) ಮೃತ ದುರ್ದೈವಿ. ರೈಲಿನ ಚಕ್ರಕ್ಕೆ ಸಿಲುಕಿದ ಪರಿಣಾಮ ಯುವಕನ ತಲೆ ಮತ್ತು ದೇಹ ಬೇರ್ಪಟ್ಟು ಭೀಕರವಾಗಿ ಸಾವನ್ನಪ್ಪಿದ್ದಾನೆ.

ಶರತ್​​ ಹಲವು ದಿನಗಳಿಂದ ಯುವತಿಯೊರ್ವಳನ್ನು ಪ್ರೀತಿಸುತ್ತಿದ್ದನು. ಈ ವಿಚಾರವನ್ನು ಯುವತಿ ಮುಂದಿಟ್ಟಿದ್ದು, ಆಕೆ ತಿರಸ್ಕರಿಸಿದ್ದಾಳೆ. ಇದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ರೇಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

ABOUT THE AUTHOR

...view details