ಕರ್ನಾಟಕ

karnataka

ETV Bharat / jagte-raho

ಬೆಳಗಾವಿ: ಪತಿ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾದ ಪತ್ನಿ - ನೊಂದ ಪತ್ನಿ ಆತ್ಮಹತ್ಯೆ

ಆನಿಗೋಳ ನಿವಾಸಿ ದೀಪಾಲಿ ಯೋಗೇಶ್ ಜಗದಾಳಿ (34) ನೇಣಿಗೆ ಶರಣಾದ ಮಹಿಳೆ. ಮೃತ ಮಹಿಳೆ ಮೇಲೆ ಪತಿ ಅನುಮಾನಗೊಂಡು ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

belagavi-husband-harassment-her-wife-sucide-news
ಬೆಳಗಾವಿ: ಪತಿ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾದ ಪತ್ನಿ..

By

Published : Oct 31, 2020, 10:14 PM IST

ಬೆಳಗಾವಿ:ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಆನಿಗೋಳ ನಿವಾಸಿ ದೀಪಾಲಿ ಯೋಗೇಶ್ ಜಗದಾಳಿ (34) ನೇಣಿಗೆ ಶರಣಾದ ಮಹಿಳೆ. ಮೃತ ಮಹಿಳೆ ಮೇಲೆ ಪತಿ ಅನುಮಾನಗೊಂಡು ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ನೊಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಕುರಿತು ಮೃತ ದೀಪಾಲಿ ತಂದೆ ಮೋಹನ, ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ಕಿರುಕುಳ ನೀಡಿದ್ದಾರೆ ಎಂದು‌ ಆರೋಪಿಸಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಯೋಗೇಶ್​​ನನ್ನು ಬಂಧಿಸಿ ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details