ಕರ್ನಾಟಕ

karnataka

ETV Bharat / jagte-raho

ಮಾಲ್​ಗಳಲ್ಲಿ ಬೈಕ್ ಪಾರ್ಕಿಂಗ್ ಮಾಡೋ ಮುನ್ನ ಎಚ್ಚರ ಎಚ್ಚರ!.. ಯಾಕಂದ್ರೆ? - ಸಿಲಿಕಾನ್​ ಸಿಟಿಯ ಮಾಲ್​ಗಳಲ್ಲಿ ಬೈಕ್ ಪಾರ್ಕಿಂಗ್

ಸಿಲಿಕಾನ್​ ಸಿಟಿಯ ಮಾಲ್​ಗಳಲ್ಲಿ ಬೈಕ್ ಪಾರ್ಕಿಂಗ್ ಮಾಡೋ ಮುನ್ನ ಸಾರ್ವಜನಿಕರು ಎಚ್ಚರ ವಹಿಸಬೇಕಿದ್ದು, ‌ನೀವು ಪಾರ್ಕಿಂಗ್ ಮಾಡಿದ ಬೈಕ್ ಇರುತ್ತೆ ಎಂಬ ಗ್ಯಾರಂಟಿಯೇ ಇಲ್ಲವಾಗಿದೆ. ಇದಕ್ಕೆ ಪೂರಕವೆಂಬಂತೆ ಬೆಳ್ಳಂದೂರು ಸೆಂಟ್ರಲ್ ಮಾಲ್​ನಲ್ಲಿ ಬೈಕ್​ವೊಂದನ್ನು ಕಳ್ಳತನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಿಲಿಕಾನ್​ ಸಿಟಿಯ ಮಾಲ್​ಗಳಲ್ಲಿ ಬೈಕ್ ಕಳ್ಳತನ

By

Published : Sep 13, 2019, 11:27 AM IST

ಬೆಂಗಳೂರು: ಸಿಲಿಕಾನ್​ ಸಿಟಿಯ ಮಾಲ್​ಗಳಲ್ಲಿ ಬೈಕ್ ಪಾರ್ಕಿಂಗ್ ಮಾಡೋ ಮುನ್ನ ಸಾರ್ವಜನಿಕರು ಎಚ್ಚರ ವಹಿಸಬೇಕಿದ್ದು, ‌ನೀವು ಪಾರ್ಕಿಂಗ್ ಮಾಡಿದ ಬೈಕ್ ಇರುತ್ತೆ ಎಂಬ ಗ್ಯಾರಂಟಿಯೇ ಇಲ್ಲವಾಗಿದೆ. ಇದಕ್ಕೆ ಪೂರಕವೆಂಬಂತೆ ಬೆಳ್ಳಂದೂರು ಸೆಂಟ್ರಲ್ ಮಾಲ್​ನಲ್ಲಿ ಬೈಕ್​ವೊಂದನ್ನು ಕಳ್ಳತನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಿಲಿಕಾನ್​ ಸಿಟಿಯ ಮಾಲ್​ಗಳಲ್ಲಿ ಬೈಕ್ ಕಳ್ಳತನ

ಹೌದು, ಸೆಂಟ್ರಲ್ ಮಾಲ್​ನಲ್ಲಿ ಕಳೆದ ತಿಂಗಳು 31ರ ಸಂಜೆ 6 ಗಂಟೆಗೆ ಬೈಕ್​ ಪಾರ್ಕಿಂಗ್ ಮಾಡಿ, ಸಿನಿಮಾ ನೋಡಲು ಹೋಗಿದ್ದ ನಾರಾಯಣ ಸ್ವಾಮಿ ಎಂಬುವವರು ಸಿನಿಮಾ ಮುಗಿಸಿ 10 ಗಂಟೆಗೆ ವಾಪಸ್ ಬಂದಾಗ ಅಲ್ಲಿ ಬೈಕ್ ಇರಲಿಲ್ಲ.‌ ಈ ಕುರಿತಂತೆ ಮಾಲ್ ಸಿಬ್ಬಂದಿ ವಿಚಾರಿಸಿದರೆ ನಮಗೆ ಗೊತ್ತಿಲ್ಲ ಅಂತ ನುಣುಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬೈಕ್​ ಕದ್ದು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಸಂಬಂಧ ನಾರಾಯಣ ಸ್ವಾಮಿ ಬೆಳ್ಳಂದೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ABOUT THE AUTHOR

...view details