ಬಂಟ್ವಾಳ: ಯುವಕನೊಬ್ಬ ಪ್ರೀತಿ-ಮದುವೆ ಎಂದು ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿ ಬಳಿಕ ಬೇರೆ ಯುವತಿ ಜೊತೆ ಮದುವೆಯಾಗಿರುವುದರಿಂದ ನೊಂದ ಯುವತಿಯು ಮದುವೆಯ ದಿನವೇ ಯುವಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.
ಲವ್-ಸೆಕ್ಸ್ ದೋಖಾ: ಮದುವೆ ದಿನವೇ ಸಂತ್ರಸ್ತೆಯಿಂದ ಆರೋಪಿಗೆ ಎದುರಾಯ್ತು ಕಂಟಕ - ವಿಟ್ಲ ಪೊಲೀಸ್ ಠಾಣೆ
ಪಾಣೆ ಮಂಗಳೂರು ಸಮೀಪದ ನಿವಾಸಿ ನಾಸೀರ್ ವಿರುದ್ಧ ಯುವತಿಯೋರ್ವಳು ಅತ್ಯಾಚಾರದ ಆರೋಪ ಮಾಡಿದ್ದಾಳೆ. ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ. ಬಳಿಕ ಬೆದರಿಕೆ ಹಾಕಿ, ಬೇರೆ ಯುವತಿಯೊಂದಿಗೆ ವಿವಾಹವಾಗಿದ್ದಾಗಿ ಸಂತ್ರಸ್ತೆ ಯುವತಿ ಆರೋಪಿಸಿದ್ದಾಳೆ.
ಲವ್-ಸೆಕ್ಸ್ ದೋಖಾ, ಮದುವೆ ದಿನವೇ ಸಂತ್ರಸ್ತ ಯುವತಿಯಿಂದ ಅತ್ಯಾಚಾರ ಪ್ರಕರಣ ದಾಖಲು...
ಪಾಣೆ ಮಂಗಳೂರು ಸಮೀಪದ ನಿವಾಸಿ ನಾಸೀರ್ ಆರೋಪಿ. ಈತ ತನ್ನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ. ಬಳಿಕ ಬೆದರಿಕೆ ಹಾಕಿ, ಬೇರೆ ಯುವತಿಯೊಂದಿಗೆ ವಿವಾಹವಾಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಯುವಕ ವಿವಾಹವಾದ ವಿಷಯ ತಿಳಿದು, ನೊಂದ ಯುವತಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.