ಥಾಣೆ: ಐದು ಟೆಂಪೋಗಳಲ್ಲಿ ಸಾಗಿಸಲಾಗುತ್ತಿದ್ದ 1 ಕೋಟಿ 70 ಲಕ್ಷ ರೂ. ರೂಪಾಯಿ ಮೌಲ್ಯದ ನಿಷೇಧಿತ ಗುಟ್ಕಾವನ್ನು ಮಹಾರಾಷ್ಟ್ರದ ಕೊಂಕಣ ವಿಭಾಗದ ಆಹಾರ ಮತ್ತು ಔಷಧ ಆಡಳಿತ ಮಂಡಳಿ (FDA) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
1.7 ಕೋಟಿ ರೂ. ಮೌಲ್ಯದ ನಿಷೇಧಿತ ಗುಟ್ಕಾ ವಶಕ್ಕೆ - ಮಹಾರಾಷ್ಟ್ರದ ಕೊಂಕಣ ವಿಭಾಗ
ಥಾಣೆಯಲ್ಲಿ ಟೆಂಪೋಗಳಲ್ಲಿ ಸಾಗಿಸಲಾಗುತ್ತಿದ್ದ 1.7 ಕೋಟಿ ರೂ. ಮೌಲ್ಯದ ನಿಷೇಧಿತ ಗುಟ್ಕಾ ಹಾಗೂ ಪಾನ್ ಮಸಾಲವನ್ನು ವಶಪಡಿಸಿಕೊಂಡಿರುವ ಎಫ್ಡಿಎ ಅಧಿಕಾರಿಗಳು, ಟೆಂಪೋ ಚಾಲಕರನ್ನು ಬಂಧಿಸಿದ್ದಾರೆ.
ನಿಷೇಧಿತ ಗುಟ್ಕಾ
ನಿಖರ ಮಾಹಿತಿ ಮೇರೆಗೆ ಎಫ್ಡಿಎ ಅಧಿಕಾರಿಗಳು ಥಾಣೆಯ ಜಿಬಿ ರಸ್ತೆಯಲ್ಲಿ ಟೆಂಪೋಗಳನ್ನು ಅಡ್ಡಗಟ್ಟಿದ್ದಾರೆ. ಅದರಲ್ಲಿದ್ದ ವಿವಿಧ ಬ್ರ್ಯಾಂಡ್ಗಳ ಗುಟ್ಕಾ ಹಾಗೂ ಪಾನ್ ಮಸಾಲವನ್ನು ಹಾಗೂ ಐದೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಟೆಂಪೋ ಚಾಲಕರನ್ನು ಬಂಧಿಸಿರುವ ಕಾಸರ್ವಾಡವಲಿ ಠಾಣಾ ಪೊಲೀಸರು, ಈ ಸಂಬಂಧ ಐಪಿಸಿ ಸೆಕ್ಷನ್ 328, 188, 272, 273ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.