ಕರ್ನಾಟಕ

karnataka

ETV Bharat / jagte-raho

ನಿಷೇಧಿತ ವಿದೇಶಿ ಕರೆನ್ಸಿ ನೋಟುಗಳ ಎಕ್ಸ್​​ಚೇಂಜ್​ಗೆ ಯತ್ನ: ಇಬ್ಬರ ಬಂಧನ - ಬೆಂಗಳೂರಿನಲ್ಲಿ ನಿಷೇಧಿತ ಕರೆನ್ಸಿ ಎಕ್ಸ್​ಚೇಂಜ್​

ತಮಿಳುನಾಡಿಂದ ಬೆಂಗಳೂರಿಗೆ ಬರುವ ಬಸ್​​ಗಳಲ್ಲಿ ಪ್ರಯಾಣಿಕರ ಜೇಬಿನಿಂದ ಹಣ ಕದಿಯುತ್ತಿದ್ದರು. ಪ್ರಯಾಣಿಕರ ದಟ್ಟಣಿ ಇದ್ದ ಬಸ್ಸಿನಲ್ಲಿ ಕಸುಬಿಗೆ ಇಳಿದರೆ ಹತ್ತು ಸಾವಿರದಷ್ಟು ಪಿಕ್ ಪಾಕೆಟ್ ಮಾಡುತ್ತಿದ್ದರು ಎಂಬುದನ್ನು ಪೊಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ.

Banned currency
ನಿಷೇಧತ ನೋಟು

By

Published : Dec 12, 2020, 3:54 AM IST

ಎಲೆಕ್ಟ್ರಾನಿಕ್​​ಸಿಟಿ: ಕಳ್ಳತನ ಕೃತ್ಯಗಳಿಂದ ಕೈರೋ ದೇಶದ ಲಿರಾ ಬ್ಯಾಂಕ್​ನ ನಿಷೇಧಿತ ಕರೆನ್ಸಿ ನೋಟುಗಳನ್ನು ಎಕ್ಸ್​ಚೇಂಜ್​ಗೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ತಮಿಳುನಾಡು ಮೂಲದ ಕೃಷ್ಣಗಿರಿ ಜಿಲ್ಲೆಯ ಶಕ್ತಿವೇಲ್ ಮತ್ತು ಧರ್ಮಪುರಿ ವಾಸಿ ಸರವಣನ್ ಬಂಧಿತ ಆರೋಪಿಗಳು. ತಮಿಳುನಾಡಿಂದ ಬೆಂಗಳೂರಿಗೆ ಬರುವ ಬಸ್​​ಗಳಲ್ಲಿನ ಪ್ರಯಾಣಿಕರ ಜೇಬಿನಿಂದ ಹಣ ಕದಿಯುತ್ತಿದ್ದರು. ಪ್ರಯಾಣಿಕರ ದಟ್ಟಣಿ ಇದ್ದ ಬಸ್ಸಿನಲ್ಲಿ ಕಸುಬಿಗೆ ಇಳಿದರೆ ಹತ್ತು ಸಾವಿರದಷ್ಟು ಪಿಕ್ ಪಾಕೆಟ್ ಮಾಡುತ್ತಿದ್ದರು ಎಂಬುದನ್ನು ಪೊಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ.

ಹಣದ ವಿಚಾರಕ್ಕೆ ಹತ್ಯೆಮಾಡಿ ಬೆಂಕಿ ಹಚ್ಚಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ ಇಬ್ಬರ ಬಂಧನ

ವಾರದ ಹಿಂದೆ ಇಬ್ಬರಿಗೆ 10 ವರ್ಷಗಳ ಹಿಂದೆ ನಿಷೇಧಿತಗೊಂಡಿದ್ದ ಟರ್ಕಿ ದೇಶದ ನೋಟುಗಳು ಕಳ್ಳತನದಲ್ಲಿ ಸಿಕ್ಕಿವೆ. ಲಿರಾ ಬ್ಯಾಂಕ್​ನ 97 ಜೇಬುಗಳ್ಳತನದಲ್ಲಿ ಎಗರಿಸಿದ್ದರು. ಪ್ರತಿ ನೋಟಿನ ಮುಖಬೆಲೆ ಭಾರತೀಯ ಕರೆನ್ಸಿಗೆ ವರ್ಗಾಯಿಸಿದರೆ 5 ಲಕ್ಷ ರೂ. ಆಗುತ್ತದೆ. ಎಲೆಕ್ಟ್ರಾನಿಕ್​ಸಿಟಿಯಲ್ಲಿ ಭಾರತೀಯ ಕರೆನ್ಸಿ ರೂಪಾಯಿಗೆ ವಿನಿಮಯ ಮಾಡಿಕೊಳ್ಳಲು ಯತ್ನಿಸುತ್ತಿದ್ದರು. ಈ ವಿಚಾರ ಪೊಲೀಸರ ಗಮನಕ್ಕೆ ಬಂದಿದ್ದು, ಕಾರ್ಯಪ್ರವೃತ್ತರಾದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಬಂಧಿತ ಆರೋಪಿ

ABOUT THE AUTHOR

...view details