ಕರ್ನಾಟಕ

karnataka

ETV Bharat / jagte-raho

ಜೋರ್‍ಮಕ್ಕಿ ಬಾಬು ಶೆಟ್ಟಿ ಕೊಲೆ ಪ್ರಕರಣ: ಆರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಿರುವ ಇಲ್ಲಿನ ಪೊಲೀಸರು ಇಂದು ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

Babu Shetty murder case
ಆರು ಆರೋಪಿಗಳು ಅರೆಸ್ಟ್​

By

Published : Dec 27, 2019, 12:27 PM IST

Updated : Dec 27, 2019, 1:22 PM IST

ಕುಂದಾಪುರ: ಬೈಕ್​ನಲ್ಲಿ ತೆರಳುತ್ತಿದ್ದ ಬಾಬು ಶೆಟ್ಟಿಯನ್ನು ಹಾಡಹಗಲೇ ದುಷ್ಕರ್ಮಿಗಳು ಅಟ್ಟಾಡಿಸಿ ಕೊಲೆಗೈದ ಘಟನೆ ನಡೆದು ಹತ್ತು ದಿನಗಳ ಬಳಿಕ ಇಂದು ಆರು ಆರೋಪಿಗಳನ್ನು ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಎಸ್ಪಿ ಹರಿರಾಂ ಶಂಕರ್, ಈ ಕೊಲೆ ಪ್ರಕರಣಕ್ಕೆ ವೈಯುಕ್ತಿಕ ದ್ವೇಷವೇ ಕಾರಣ ಎಂದು ತಿಳಿಸಿದ್ದಾರೆ.

ಜೋರ್‍ಮಕ್ಕಿ ಬಾಬು ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳು

ಬಾಬು ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಬಾಬು ಶೆಟ್ಟಿಯ ಸಂಬಂಧಿಕ ತೇಜಪ್ಪ ಶೆಟ್ಟಿ (68) ಎಂದು ಗುರುತಿಸಲಾಗಿದ್ದು, ಆತನನ್ನು ಪ್ರಮುಖ ಆರೋಪಿ ಎಂದು ದಾಖಲಿಸಲಾಗಿದೆ. ಈ ಹಿಂದೆ ಹರೀಶ್ ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿಗೆ ಚೂರಿ ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇರಳಕಟ್ಟೆ ನಿವಾಸಿ ತೇಜಪ್ಪ ಶೆಟ್ಟಿ ಹಾಗೂ ಬಾಬು ಶೆಟ್ಟಿ ನಡುವೆ ಗಲಾಟೆ ನಡೆದಿತ್ತು ಎನ್ನಲಾಗ್ತಿದೆ.

ಇದೇ ಕಾರಣಕ್ಕೆ ಬಾಬು ಶೆಟ್ಟಿಯನ್ನು ಕೊಲ್ಲಬೇಕು ಎಂದು ತೀರ್ಮಾನಿಸಿದ ತೇಜಪ್ಪ ಶೆಟ್ಟಿ, ಎರಡನೇ ಆರೋಪಿ ಶೆಟ್ರಕಟ್ಟೆ ನಿವಾಸಿ ಉದಯರಾಜ್ ಶೆಟ್ಟಿ (55) ಎಂಬಾತನ ಜೊತೆ ಸೇರಿ ಸಂಚು ರೂಪಿಸಿ ಉಳಿದ ನಾಲ್ಕು ಜನ ಆರೋಪಿಗಳಾದ ಕೆಂಚನೂರು ನಿವಾಸಿ ರಮೇಶ್ ಪೂಜಾರಿ (25), ಆನಗಳ್ಳಿ ನಿವಾಸಿ ಪ್ರವೀಣ್ ಪೂಜಾರಿ (25), ಬಸ್ರೂರು ನಿವಾಸಿ ಸಚಿನ್ ಪೂಜಾರಿ (21) ಹಾಗೂ ಆನಗಳ್ಳಿ ನಿವಾಸಿ ರಾಘವೇಂದ್ರ ಪೂಜಾರಿ (24) ಸಹಕಾರದಲ್ಲಿ ಕೊಲೆ ಕೃತ್ಯ ನಡೆಸಲಾಗಿದೆ ಎಂದು ಹೇಳಿದರು.

ಕಳೆದ ಹಲವು ರ್ಷಗಳಿಂದ ಬಾಬು ಶೆಟ್ಟಿ ಹಾಗೂ ತೇಜಪ್ಪ ಶೆಟ್ಟಿ ನಡುವೆ ಕಲಹಗಳು ನಡೆಯುತ್ತಲೇ ಇದ್ದವು, ಇತ್ತೀಚೆಗೆ ಎರಡು 307 ಪ್ರಕರಣಗಳೂ ನಡೆದಿದ್ದರಿಂದ ಬಾಬು ಶೆಟ್ಟಿ ಬದುಕುಳಿದರೆ ತೇಜಪ್ಪ ಶೆಟ್ಟಿ ಮತ್ತು ಅವರ ತಂಡಕ್ಕೆ ಸಮಸ್ಯೆ ಉಂಟಾಗುತ್ತದೆ ಎಂದು ಯೋಚಿಸಿ ಈ ಕೃತ್ಯ ನಡೆಸಿರುವುದಾಗಿ ತೇಜಪ್ಪ ಶೆಟ್ಟಿ ಬಾಯ್ಬಿಟ್ಟಿರುವುದಾಗಿ ಎಎಸ್ಪಿ ಹರಿರಾಂ ಶಂಕರ್ ಹೆಳಿದ್ದಾರೆ.

Last Updated : Dec 27, 2019, 1:22 PM IST

ABOUT THE AUTHOR

...view details