ಕರ್ನಾಟಕ

karnataka

ETV Bharat / jagte-raho

ಪೊಲೀಸರ ವೇಷದಲ್ಲಿ ಬಂದು ದರೋಡೆಗೆ ಯತ್ನ.. ಜನ ಸೇರುತ್ತಿದ್ದಂತೆ ಪರಾರಿಯಾದ ಖದೀಮರು - ಗೋಪನಹಳ್ಳಿ ಗ್ರಾಮದ ನಿವಾಸಿ ದೇವರಾಜ ಎಂಬುವರ ಮನೆ

ಪೊಲೀಸರಂತೆ ಶೂ, ಖಾಕಿ ಪ್ಯಾಂಟ್, ಟೋಪಿ ಧರಿಸಿ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮನೆಯಲ್ಲಿದ್ದ ಬೀರು ಹೊತ್ತೊಯ್ಯಲು ಯತ್ನಿಸಿ ವಿಫಲರಾಗಿದ್ದಾರೆ. ಈ ವೇಳೆ ಜನ‌ ಸೇರುವುದನ್ನು ಕಂಡ ದರೋಡೆಕೋರರು ಪರಾರಿಯಾಗಿದ್ದಾರೆ.

Attempted robbery in the guise of police
ಖಾಕಿ ವೇಷದಲ್ಲಿ ಬಂದು ದರೋಡೆಗೆ ಯತ್ನ, ಜನ ಸೇರುತ್ತಿದಂತೆ ಪರಾರಿಯಾದ ಖದೀಮರು

By

Published : Aug 7, 2020, 7:14 PM IST

Updated : Aug 7, 2020, 7:45 PM IST

ಚಿತ್ರದುರ್ಗ: ಪೊಲೀಸರ ವೇಷದಲ್ಲಿ ಆಗಮಿಸಿದ ದರೋಡೆಕೋರರ ಗುಂಪೊಂದು ದರೋಡೆಗೆ ಯತ್ನಿಸಿ ವಿಫಲರಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿಯಲ್ಲಿ ನಡೆದಿದೆ.

ಪೊಲೀಸರ ವೇಷದಲ್ಲಿ ಬಂದು ದರೋಡೆಗೆ ಯತ್ನ.. ಜನ ಸೇರುತ್ತಿದ್ದಂತೆ ಪರಾರಿಯಾದ ಖದೀಮರು

ಗೋಪನಹಳ್ಳಿ ಗ್ರಾಮದ ನಿವಾಸಿ ದೇವರಾಜ ಎಂಬುವರ ಮನೆಗೆ ತಡರಾತ್ರಿ ವೇಳೆ ನುಗ್ಗಿ‌ದ ಖದೀಮರು ದರೋಡೆಗೆ ಯತ್ನಿಸಿದ್ದರು. ಪೊಲೀಸರಂತೆ ಶೂ, ಖಾಕಿ ಪ್ಯಾಂಟ್, ಟೋಪಿ ಧರಿಸಿ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮನೆಯಲ್ಲಿದ್ದ ಬೀರು ಹೊತ್ತೊಯ್ಯಲು ಯತ್ನಿಸಿ ವಿಫಲರಾಗಿದ್ದಾರೆ. ಈ ವೇಳೆ ಜನ‌ ಸೇರುವುದನ್ನು ಕಂಡ ದರೋಡೆಕೋರರು ಪರಾರಿಯಾಗಿದ್ದಾರೆ. ಪೊಲೀಸರ ವೇಷದಲ್ಲಿ ಆಗಮಿಸಿದ‌ ಕಳ್ಳರ ಸುದ್ದಿ ಕೇಳಿ ಇಡೀ ಗ್ರಾಮ ಆತಂಕದಲ್ಲಿ ಕಾಲ‌ಕಳೆಯುತ್ತಿದ್ದು, ಚಳ್ಳಕೆರೆ ಠಾಣೆ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Last Updated : Aug 7, 2020, 7:45 PM IST

ABOUT THE AUTHOR

...view details