ಬೆಂಗಳೂರು: ನೀವು ಬೆಳಗಿನಜಾವ ಒಬ್ಬರೇ ಓಡಾಡುತ್ತಿರಾ? ಹಾಗಾದ್ರೆ, ನಿಮ್ಮ ಮೈಯೆಲ್ಲಾ ಕಣ್ಣಾಗಿರಲಿ. ಏಕೆಂದ್ರೆ ಯಾವಾಗ, ಎಲ್ಲಿಂದ ಸುಲಿಗೆಕೋರರು ಬರುತ್ತಾರೋ ಗೊತ್ತಿಲ್ಲ.
ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಕೃತ್ಯ... ಬೆಳ್ಳಂಬೆಳಗ್ಗೆ ಒಂಟಿಯಾಗಿ ಓಡಾಡುವ ಯುವತಿಯರೇ ಎಚ್ಚರ! - crime news in bangalore
ಬೆಳ್ಳಂಬೆಳಗ್ಗೆ ಯುವತಿವೋರ್ವಳು ಬೆಂಗಳೂರಿನ ವಿಕ್ಟೋರಿಯಾ ಲೇಔಟ್ನಲ್ಲಿ ಒಂಟಿಯಾಗಿ ಫುಟ್ ಪಾತ್ ಮೇಲೆ ತೆರಳುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ.
![ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಕೃತ್ಯ... ಬೆಳ್ಳಂಬೆಳಗ್ಗೆ ಒಂಟಿಯಾಗಿ ಓಡಾಡುವ ಯುವತಿಯರೇ ಎಚ್ಚರ! attempt-to-snatch-mobile-from-girl-at-bangalore](https://etvbharatimages.akamaized.net/etvbharat/prod-images/768-512-5951872-thumbnail-3x2-bng.jpg)
ನಾವು ಇಷ್ಟೆಲ್ಲ ಹೇಳೋಕೆ ಕಾರಣ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಸಿಸಿಟಿವಿ ದೃಶ್ಯಾವಳಿ. ಇಂದು ಬೆಳ್ಳಂಬೆಳಗ್ಗೆ ಯುವತಿವೋರ್ವಳು ನಗರದ ವಿಕ್ಟೋರಿಯಾ ಲೇಔಟ್ನಲ್ಲಿ ಒಂಟಿಯಾಗಿ ಫುಟ್ ಪಾತ್ ಮೇಲೆ ತೆರಳುತ್ತಿದ್ದಾಗ ದಿಢೀರ್ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ.
ಆದರೆ, ಅದೃಷ್ಟವಶಾತ್ ಯುವತಿ ದರೋಡೆಕೋರರಿಂದ ತಪ್ಪಿಸಿಕೊಂಡು ಕಿರುಚುತ್ತ ವಾಪಸ್ ಹಿಂದೆ ಓಡಿ ಬಂದಿದ್ದಾಳೆ. ಆಕೆಯ ಚೀರಾಟದಿಂದ ಎಚ್ಚೆತ್ತುಕೊಂಡ ಖದೀಮರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ವೇಳೆ ಯುವತಿಯ ಮೊಬೈಲ್ ಕಸಿಯಲು ಯತ್ನಿಸಿರುವ ದೃಶ್ಯ ಆ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಪೊಲೀಸರು ಆರೋಪಿಗಳ ಬಂಧನಕ್ಕೆ ತಲಾಶ್ ನಡೆಸಿದ್ದಾರೆ.