ಮಂಗಳೂರು: ನಗರದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿಯ ಮೇಲೆ ಇಂದು ಕೊಲೆ ಯತ್ನ ನಡೆದಿದೆ.
ಓದಿ: ಉಲ್ಲಂಜೆ ಬಳಿ ಮಾರಕಾಸ್ತ್ರಗಳಿಂದ ದಾಳಿ: ಸುರತ್ಕಲ್ ದೀಪಕ್ ರಾವ್ ಕೊಲೆ ಆರೋಪಿ ಎಸ್ಕೇಪ್
ಮಂಗಳೂರು: ನಗರದಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದ್ದ ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿಯ ಮೇಲೆ ಇಂದು ಕೊಲೆ ಯತ್ನ ನಡೆದಿದೆ.
ಓದಿ: ಉಲ್ಲಂಜೆ ಬಳಿ ಮಾರಕಾಸ್ತ್ರಗಳಿಂದ ದಾಳಿ: ಸುರತ್ಕಲ್ ದೀಪಕ್ ರಾವ್ ಕೊಲೆ ಆರೋಪಿ ಎಸ್ಕೇಪ್
ಸುರತ್ಕಲ್ನ ಪಿಂಕಿ ನವಾಜ್ ಎಂಬಾತನ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಪಿಂಕಿ ನವಾಜ್ ಈತ ದೀಪಕ್ ರಾವ್ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಈತ ಇಂದು ಸುರತ್ಕಲ್ ಕಾಟಿಪಳ್ಳದ ಎರಡನೇ ಬ್ಲಾಕ್ನಲ್ಲಿ ಇರುವ ವೇಳೆ, ಕಾರಿನಲ್ಲಿ ಬಂದ ತಂಡ ಅಟ್ಟಾಡಿಸಿಕೊಂಡು ತಲವಾರಿನಿಂದ ದಾಳಿ ಮಾಡಿದೆ.
ಈ ಹಲ್ಲೆ ಪ್ರಕರಣಕ್ಕೂ, ದೀಪಕ್ ಕೊಲೆ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ. ಶಾಕಿಬ್ ಯಾನೆ ಶಬ್ಬು ಎಂಬಾತ ನಾಲ್ಕೈದು ಮಂದಿ ತಂಡದೊಂದಿಗೆ ಈ ದುಷ್ಕೃತ್ಯ ಎಸಗಿದ್ದಾನೆ.
ಶಾಕಿಬ್ ಸರಗಳ್ಳತನ ಮತ್ತು ಇತರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುರತ್ಕಲ್ ಪೊಲೀಸರು ಆರೋಪಿಗಳ ಶೋಧ ನಡೆಸುತ್ತಿದ್ದಾರೆ.