ಕೊಳ್ಳೇಗಾಲ:ಪತ್ನಿಗೆ ಕಿರುಕುಳ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗೆ ಇಲ್ಲಿನ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 1.35 ಲಕ್ಷ ರೂ. ದಂಡವನ್ನು ವಿಧಿಸಿದೆ.
ತಾಲೂಕಿನ ಧನಗೆರೆ ಗ್ರಾಮದ ಮಹದೇವ ಶಿಕ್ಷೆಗೊಳಗಾದ ಆರೋಪಿ. ಈತ ಅದೇ ಗ್ರಾಮದ ಮಹಿಳೆಯೋರ್ವಳ ಜೊತೆ ಅಕ್ರಮ ಸಂಬಂಧವನ್ನು ಇಟ್ಟುಕೊಂಡಿದ್ದ. ಈ ವಿಷಯ ತಿಳಿದ ಪತ್ನಿ ಮಂಜುಳ ಗಂಡ ಮಹದೇವನೊಂದಿಗೆ ಅಕ್ರಮ ಸಂಬಂಧದ ಬಗ್ಗೆ ದಿನ ನಿತ್ಯ ಜಗಳ ನಡೆಯುತ್ತಿತ್ತು. ಇದರಿಂದ ಕೋಪಗೊಂಡ ಪತಿ ಮಹದೇವ ಪತ್ನಿ ಮಂಜುಳ ಬಲಗೈ ಬೆರಳನ್ನು ಕುಡುಗೋಲಿನಿಂದ ಕತ್ತರಿಸಿದ್ದಾನೆ.