ಉಡುಪಿ:ಇಲ್ಲಿನ ಪುತ್ತೂರು ಗ್ರಾಮದ ವಿಷ್ಣುಮೂರ್ತಿ ನಗರ ನಿವಾಸಿ ಮಾಲತಿ ಕಾಮತ್ ಎಂಬವರನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಆನಂದ ಮತ್ತು ಅಶೋಕ್ ಎಂದು ಗುರುತಿಸಲಾಗಿದೆ. ಅಂದು ಕೊಲೆಗೈದು ವೃದ್ಧೆ ಮೈ ಮೇಲಿದ್ದ ಚಿನ್ನಾಭರಣ ಹಾಗೂ ಕಪಾಟಿನಲ್ಲಿದ್ದ ನಗದು ದೋಚಿ ಪರಾರಿಯಾಗಿದ್ದರು.