ಬೆಳಗಾವಿ: ಕುಡಿದ ಮತ್ತಿನಲ್ಲಿ ಸೈನಿಕನೋರ್ವನ ಮನೆಗೆ ನುಗ್ಗಿ ದಾಂಧಲೆ ನಡೆಸಿ, ಮನೆಗೆ ಬೆಂಕಿ ಹಚ್ಚಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಣ್ಣೆ ಏಟಲ್ಲಿ ಯೋಧನ ಮನೆಗೆ ನುಗ್ಗಿ ಬೆಂಕಿ ಹಚ್ಚಲು ಯತ್ನಿಸಿದ ಮೂವರ ಬಂಧನ - ಆರೋಪಿ ಮಹೇಶ ದುರ್ಕೆ ಮತ್ತು ಆತನ ಇಬ್ಬರು ಸಹಚರರು
ಹಣದ ವ್ಯಾಜ್ಯದ ವಿಚಾರವಾಗಿ ಆರೋಪಿ ಮಹೇಶ ದುರ್ಕೆ ಮತ್ತು ಆತನ ಇಬ್ಬರು ಸಹಚರರು ದಾಂಧಲೆ ನಡೆಸಿದ್ದರು. ಇದರಿಂದಾಗಿ ಸೈನಿಕ ಭರತೇಶ ಚೌಗುಲೆ ಕುಟುಂಬ ಭೀತಿಗೆ ಒಳಗಾಗಿತ್ತು. ಘಟನೆಯ ಕುರಿತಂತೆ ಬೆಳಗಾವಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ.
ಯೋಧನ ಮನೆಗೆ ನುಗ್ಗಿ ಬೆಂಕಿ ಹಚ್ಚಲು ಯತ್ನಿಸಿದ್ದ ಮೂವರು ಆರೋಪಿಗಳ ಬಂಧನ
ತಾಲೂಕಿನ ಕಿಣಯೆ ಗ್ರಾಮದಲ್ಲಿ ಸೆಪ್ಟೆಂಬರ್ 1 ರಂದು ಈ ಘಟನೆ ನಡೆದಿತ್ತು. ಸೈನಿಕ ಭರತೇಶ ಚೌಗುಲೆ ಸದ್ಯಕ್ಕೆ ಆಸ್ಸಾಂನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಣದ ವ್ಯಾಜ್ಯದ ವಿಚಾರವಾಗಿ ಆರೋಪಿ ಮಹೇಶ ದುರ್ಕೆ ಮತ್ತು ಆತನ ಇಬ್ಬರು ಸಹಚರರು ದಾಂಧಲೆ ನಡೆಸಿದ್ದರು.
ಇದರಿಂದಾಗಿ ಸೈನಿಕ ಭರತೇಶ ಚೌಗುಲೆ ಕುಟುಂಬ ಭೀತಿಗೆ ಒಳಗಾಗಿತ್ತು. ಘಟನೆಯ ಕುರಿತಂತೆ ಬೆಳಗಾವಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತಂತೆ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಮಾಹಿತಿ ನೀಡಿದ್ದಾರೆ.
Last Updated : Sep 11, 2020, 3:28 PM IST