ನೆಲಮಂಗಲ: ರಾತ್ರಿ ವೇಳೆ ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ದೋಚಲು ಹೊಂಚು ಹಾಕಿ ಕಾಯುತ್ತಿದ್ದ ದರೋಡೆಕೋರರನ್ನು ಸೆರೆ ಹಿಡಿಯುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನೆಲಮಂಗಲ: ರಾತ್ರಿ ವೇಳೆ ಮಾರಕಾಸ್ತ್ರದೊಂದಿಗೆ ದರೋಡೆಗೆ ಸಂಚು, ನಾಲ್ವರು ಖಾಕಿ ಬಲೆಗೆ - ಮಾರಕಾಸ್ತ್ರದೊಂದಿಗೆ ದರೋಡೆಗೆ ಹೊಂಚು
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿಪುರ ಗಂಗೊಂಡನಹಳ್ಳಿ ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ಸಬ್ ಇನ್ಸ್ ಪೆಕ್ಟರ್ ದೇವಿಕಾದೇವಿ ನೇತೃತ್ವದಲ್ಲಿ ದಾಳಿ ಮಾಡಿ 8 ದರೋಡೆಕೋರರಲ್ಲಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೆಲಮಂಗಲ: ರಾತ್ರಿ ವೇಳೆ ಮಾರಕಾಸ್ತ್ರದೊಂದಿಗೆ ದರೋಡೆಗೆ ಸಂಚು, ನಾಲ್ವರು ಖಾಕಿ ಬಲೆಗೆ
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿಪುರ ಗಂಗೊಂಡನಹಳ್ಳಿ ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ಸಬ್ ಇನ್ಸ್ ಪೆಕ್ಟರ್ ದೇವಿಕಾದೇವಿ ನೇತೃತ್ವದಲ್ಲಿ ದಾಳಿ ಮಾಡಿ 8 ದರೋಡೆಕೋರರಲ್ಲಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಾದ ವಿನಯ್ ಕುಮಾರ್, ರವಿಕಿರಣ್, ಭರತ್, ಚೇತನ್ರಿಂದ ಒಂದು ರಾಡು, ಎರಡು ಚಾಕು, ಒಂದು ದೊಣ್ಣೆ ಮತ್ತು ಖಾರದ ಪುಡಿ ವಶಪಡಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಲಾಗಿದೆ.