ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಬರೋಬ್ಬರಿ 20 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿರುವ ಮಾದಕ ವಸ್ತು ನಿಗ್ರಹ ದಳ (Anti Drug Squad) ಐವರನ್ನು ಬಂಧಿಸಿದೆ.
ಎಡಿಎಸ್ ಭರ್ಜರಿ ಬೇಟೆ: 20 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ, ಐವರ ಬಂಧನ - ಮಹಾರಾಷ್ಟ್ರ ಡ್ರಗ್ಸ್ ಸುದ್ದಿ
ಕಾರಿನಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಐವರನ್ನು ಆರೋಪಿಗಳನ್ನು ಬಂಧಿಸಿರುವ ಮಾದಕ ವಸ್ತು ನಿಗ್ರಹ ದಳ, 20 ಕೋಟಿ ರೂ. ಮೌಲ್ಯದ ಡ್ರಗ್ಸ್ಅನ್ನು ವಶಪಡಿಸಿಕೊಂಡಿದೆ.
ಆರೋಪಿಗಳು ಪುಣೆಯ ಖೇಡ್ ತಾಲೂಕಿನ ಶೆಲ್ಪಿಮಲ್ಗಾಂವ್ ಪ್ರದೇಶದಲ್ಲಿ ಕಾರಿನಲ್ಲಿ ಮಾದಕ ವಸ್ತು ಸಾಗಿಸಲಾಗುತ್ತಿತ್ತು. ನಿಖರ ಮಾಹಿತಿ ಮೇರೆಗೆ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಹಾಗೂ ಪೊಲೀಸರು ಕಾರನ್ನು ಅಡ್ಡಗಟ್ಟಿದ್ದಾರೆ ಮಾದಕ ವಸ್ತವನ್ನು ವಶಕ್ಕೆ ಪಡೆದಿದ್ದಾರೆ.
ಚೇತನ್ ದಂಡ್ವಾಟೆ (28), ಆನಂದ್ಗೀರ್ ಗೋಸಾಮಿ (25), ಅಕ್ಷಯ್ ಕಾಳೆ (25), ಸಂಜೀವ್ ಕುಮಾರ್ ರಾವತ್ (44) ಹಾಗೂ ತೌಸಿಫ್ ಹಸನ್ (31) ಬಂಧಿತ ಆರೋಪಿಗಳು. ಇವರ ಬಳಿ ಇದ್ದ ಕಾರು ಹಾಗೂ 20 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದ್ದು, ದಂಧೆಯ ಜಾಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.