ಬದೌನ್: ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, 15 ವರ್ಷದ ಅಪ್ರಾಪ್ತೆ ಮೇಲೆ ನೆರೆಮನೆಯ ಯುವಕ ಅಟ್ಟಹಾಸ ಮೆರೆದಿದ್ದಾನೆ.
ಬುಧವಾರ ರಾತ್ರಿ ತನ್ನ ಗ್ರಾಮದ ದೇವಾಲಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಬಾಲಕಿ ತೆರಳಿದ್ದ ವೇಳೆ ಆಕೆಯನ್ನು ಆರೋಪಿ ವೀರ್ ಪಾಲ್ (20) ಮನೆಯೊಂದಕ್ಕೆ ಎಳೆದೊಯ್ದಿದ್ದಾನೆ. ಪಿಂಟು ಎಂಬ ಆತನ ಸಂಬಂಧಿ ಯುವಕನನ್ನು ಮನೆಯ ಹೊರಗೆ ಕಾವಲು ಕಾಯಲು ನಿಲ್ಲಿಸಿ ವೀರ್ ಪಾಲ್ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಇದನ್ನೂ ಓದಿ: ನಿಲ್ಲದ ಕಾಮುಕರ ಅಟ್ಟಹಾಸ : 50 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ
ಸಂತ್ರಸ್ತೆಯ ಹೇಳಿಕೆ ಮೇರೆಗೆ ಆರೋಪಿ ವೀರ್ ಪಾಲ್ನನ್ನು ಬಂಧಿಸಿರುವ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಮತ್ತೊಬ್ಬ ಆರೋಪಿ ಪಿಂಟುವಿಗಾಗಿ ಬಲೆ ಬೀಸಿರುವುದಾಗಿ ಪೊಲೀಸ್ ಇನ್ಸ್ಪೆಕ್ಟರ್ ಸುಧಾಕರ್ ಪಾಂಡೆ ತಿಳಿಸಿದ್ದಾರೆ.
ಮೊನ್ನೆಯಷ್ಟೇ 50 ವರ್ಷದ ಅಂಗನವಾಡಿ ಕಾರ್ಯಕರ್ತೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಹತ್ಯೆ ಮಾಡಿರುವ ಘಟನೆ ಬದೌನ್ ಜಿಲ್ಲೆಯಲ್ಲಿ ನಡೆದಿತ್ತು.