ಬೆಂಗಳೂರು:ಬೈಕ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಬೈಕ್ ಕಳ್ಳನ ಬಂಧನ: 5 ಬೈಕ್ ವಶಕ್ಕೆ ಪಡೆದ ಪೊಲೀಸರು - ಬೆಂಗಳೂರು ಇತ್ತೀಚಿನ ಸುದ್ದಿ
ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
![ಬೈಕ್ ಕಳ್ಳನ ಬಂಧನ: 5 ಬೈಕ್ ವಶಕ್ಕೆ ಪಡೆದ ಪೊಲೀಸರು bengaluru](https://etvbharatimages.akamaized.net/etvbharat/prod-images/768-512-10459359-thumbnail-3x2-mng.jpg)
ಬೈಕ್ ಕಳ್ಳನ ಬಂಧನ
ಮೊಹಮ್ಮದ್ ಅಜರುದ್ದೀನ್ ಬಂಧಿತ ಆರೋಪಿ. ಬಂಧಿತನಿಂದ 3 ಲಕ್ಷದ 50 ಸಾವಿರ ಬೆಲೆಬಾಳುವ 5 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.
ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.