ಗದಗ :ಮೊಬೈಲ್ ಕಳ್ಳರನ್ನು ಸಾರ್ವಜನಿಕರೇ ರೆಡ್ ಹ್ಯಾಂಡ್ ಆಗಿ ಹಿಡಿದು ಗೂಸಾ ಕೊಟ್ಟು ಬಳಿಕ ಪೊಲೀಸರಿಗೊಪ್ಪಿಸಿದ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ. ಕೆಲ ದಿನಗಳಿಂದ ಮೊಬೈಲ್ ಕಳ್ಳರ ಹಾವಳಿಗೆ ಜಿಲ್ಲೆಯ ಜನ ಕಂಗಾಲಾಗಿದ್ದರು. ಸದ್ಯ ರೋಣ ಪಟ್ಟಣದ ಹೊರವಲಯದಲ್ಲಿ ಠಿಕಾಣಿ ಹೂಡಿದ್ದ ಆಂಧ್ರ ಮೂಲದ ಗ್ಯಾಂಗ್, ಮಕ್ಕಳ ಮೂಲಕ ಮೊಬೈಲ್ ಕಳ್ಳತನ ಮಾಡಿಸುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ.
ಮಕ್ಕಳನ್ನ ಬಳಸಿ ಮೊಬೈಲ್ ಕಳ್ಳತನ.. ಆಂಧ್ರದ ಖದೀಮರನ್ನು ಹಿಡಿದು ಖಾಕಿಗೊಪ್ಪಿಸಿದ ರೋಣ ಜನ - rona mobile theft caught by public
ರೋಣ, ಗದಗ, ಗಜೇಂದ್ರಗಡ, ನರೇಗಲ್, ಬಾದಾಮಿ, ಬನಶಂಕರಿ ಸಂತೆ ಸೇರಿ ಜನಸಂದಣಿ ಇರುವ ಸ್ಥಳಗಳನ್ನು ಟಾರ್ಗೇಟ್ ಮಾಡಿ ಕದಿಯುತ್ತಿದ್ದರು. ಸದ್ಯ ಬಾಲಕನೊಬ್ಬ ರೋಣ ಸಂತೆಯಲ್ಲಿ ಮೊಬೈಲ್ ಕಳ್ಳತನ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾನೆ..
ಮಕ್ಕಳನ್ನು ಬಳಸಿ ಮೊಬೈಲ್ ಕಳ್ಳತನ
ರೋಣ, ಗದಗ, ಗಜೇಂದ್ರಗಡ, ನರೇಗಲ್, ಬಾದಾಮಿ, ಬನಶಂಕರಿ ಸಂತೆ ಸೇರಿ ಜನಸಂದಣಿ ಇರುವ ಸ್ಥಳಗಳನ್ನು ಟಾರ್ಗೇಟ್ ಮಾಡಿ ಕದಿಯುತ್ತಿದ್ದರು. ಸದ್ಯ ಬಾಲಕನೊಬ್ಬ ರೋಣ ಸಂತೆಯಲ್ಲಿ ಮೊಬೈಲ್ ಕಳ್ಳತನ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾನೆ.
ಹಾಗೂ ಬಾಲಕನ ಸಂಬಂಧಿ ಮಹಿಳೆಯೋರ್ವಳನ್ನು ಹಿಡಿದು ಗೂಸಾ ನೀಡಿ ಸಾರ್ವಜನಿಕರು ಪೊಲೀಸರಿಗೊಪ್ಪಿಸಿದ್ದಾರೆ. ಈ ಕುರಿತು ಗದಗ ಜಿಲ್ಲೆ ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರಿಂದ 5 ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.