ಅನಂತಪುರಂ:ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ತಾಡಿಪತ್ರಿ ನಿವಾಸಿ ಸೋಮ ಭರತ್ ಎಂಬ ಯುವಕ ಜಲಂಧರ್ನ ಪಂಜಾಬ್ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ 3ನೇ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ. ಪರೀಕ್ಷೆಯಲ್ಲಿ ಗ್ರೇಡ್ ಬರದೇ ಇರುವುದರಿಂದ ಮತ್ತೊಮ್ಮೆ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿದ್ದ.
‘ಸುಸೈಡ್ ಮಾಡಿಕೊಳ್ಳವವರು ಹೇಡಿಗಳಲ್ಲ.. ನನ್ನ ಆತ್ಮಹತ್ಯೆಗೆ ಪ್ರೀತಿಯಲ್ಲ, ಒಂಟಿತನವೇ ಕಾರಣ!’
ಸುಸೈಡ್ ಮಾಡಿಕೊಳ್ಳವವರು ಹೇಡಿಗಳಲ್ಲ. ಅವರು ಧೈರ್ಯವಂತರು. ನನ್ನ ಆತ್ಮಹತ್ಯೆಗೆ ಪ್ರೀತಿ-ಪ್ರೇಮ ವೈಫಲ್ಯ ಕಾರಣವಲ್ಲ. ಒಂಟಿತನವೇ ನನ್ನ ಈ ನಿರ್ಧಾರಕ್ಕೆ ಮುಖ್ಯ ಕಾರಣ ಎಂದು ಇಂಜಿನಿಯರ್ ವಿದ್ಯಾರ್ಥಿಯೊಬ್ಬ ಡೆತ್ನೋಟು ಬರೆದಿಟ್ಟು ಪ್ರಾಣಬಿಟ್ಟಿದ್ದಾನೆ.
ಆದರೆ, ಭರತ್ ಹಾಸ್ಟೆಲ್ನಲ್ಲಿ ಒಂಟಿಯಾಗಿದ್ರಿಂದ ಬೇಡದ ಆಲೋಚನೆಗಳೆಲ್ಲ ಆತನನ್ನ ಕಾಡಿವೆ. ಓದಿನಲ್ಲಿ ಹಿಂದೆ ಬಿದ್ದಿದ್ದು ಒಂದು ಕಡೆಯಾದ್ರೇ, ಒಂಟಿತನಕ್ಕೆ ಬೇಸತ್ತಿದ್ದನಂತೆ. ಒಂಟಿತನ ಬಿಡದೇ ಕಾಡಿದ್ದರಿಂದಾಗಿ ಭರತ್ಗೆ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಬಂದಿದೆ. ಹೀಗಾಗಿ ಭರತ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಾಸ್ಟೆಲ್ನಲ್ಲಿ ಒಂಟಿಯಾಗಿ ಇರಬೇಡಿ. ಒಂದು ಗಂಟೆಯಾದ್ರೂ ಆಟವಾಡಲು ಹೋಗಿ. ಆತ್ಮಹತ್ಯೆ ಮಾಡಿಕೊಳ್ಳವವರೆಲ್ಲ ಹೇಡಿಗಳಲ್ಲ. ಅವರೆಲ್ಲ ಧೈರ್ಯವಂತರು. ನನ್ನ ಸಾವಿಗೆ ಯಾವುದೇ ಪ್ರೀತಿ-ಪ್ರೇಮ ವೈಫಲ್ಯ ಕಾರಣವಲ್ಲ. ಒಂಟಿಯಾಗಿರುವುದರಿಂದ ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಭರತ್ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾನೆ. ಈ ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಸಲಿಗೆ ಆತ್ಮಹತ್ಯೆಗೆ ಕಾರಣ ಏನು ಅನ್ನೋದರ ಕುರಿತಂತೆ ಪೊಲೀಸರು ಎಲ್ಲ ದೃಷ್ಟಿಕೋನಗಳಿಂದ ತನಿಖೆ ಕೈಗೊಂಡಿದ್ದಾರೆ.