ವಿಶಾಖಪಟ್ಟಣಂ(ಆಂಧ್ರಪ್ರದೇಶ): ಹೈಕೋರ್ಟ್ ನ್ಯಾಯಮೂರ್ತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದ ಆರೋಪ ಪ್ರಕರಣ ಸಂಬಂಧ ವೈಎಸ್‌ಆರ್‌ಸಿಪಿ ಸಂಸದ ಎನ್.ಸುರೇಶ್, ಶಾಸಕ ಎ. ಕೃಷ್ಣಮೋಹನ್ ಸೇರಿದಂತೆ 49 ಸದಸ್ಯರಿಗೆ ಹೈಕೋರ್ಟ್ ನೋಟಿಸ್ ನೀಡಿದೆ.
ವೈಎಸ್‌ಆರ್‌ಸಿಪಿ ಎಂಪಿ, ಮಾಜಿ ಶಾಸಕನಿಗೆ ಹೈಕೋರ್ಟ್ ನೋಟಿಸ್ - ಮಾಜಿ ಶಾಸಕ ಎ.ಕೃಷ್ಣ ಮೋಹನ್
ಸರ್ಕಾರಿ ವೈದ್ಯ ಡಾ. ಸುಧಾಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಜಡ್ಜ್ ವಿರುದ್ಧ ವಿವಾದಾತ್ಮಕ ಪೋಸ್ಟ್ ಹಾಕಿದ್ದ ಆರೋಪದಡಿ ವೈಎಸ್‌ಆರ್‌ಪಿ ಸಂಸದ ಸುರೇಶ್, ಮಾಜಿ ಶಾಸಕ ಎ. ಕೃಷ್ಣಮೋಹನ್ ಸೇರಿ 49 ಮಂದಿಗೆ ಆಂಧ್ರ ಹೈಕೋರ್ಟ್ ನೋಟಿಸ್ ನೀಡಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರ ಹೈಕೋರ್ಟ್ ಇದು ಸುಮೊಟೊ ಪ್ರಕರಣ ಅಂತ ಪರಿಗಣಿಸಿದೆ. ಜಡ್ಜ್ ವಿರುದ್ಧದ ಪೋಸ್ಟ್ ಸಂಬಂಧ ವಕೀಲ ಲಕ್ಷ್ಮಿನಾರಾಯಣ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ರು. ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ಗಳು, ರಾಜಕೀಯ ನಾಯಕರ ಕ್ಲಿಪ್‌ಗಳನ್ನು ಕೋರ್ಟ್ ಪರಿಶೀಲನೆ ಮಾಡಿದೆ. ಈ ಪ್ರಕರಣಗಳನ್ನು ಸುಮೊಟೊದಡಿ ಸ್ವೀಕರಿಸುತ್ತಿರುವುದಾಗಿ ತಿಳಿಸಿದೆ.
ನ್ಯಾಯಮೂರ್ತಿ ಅವರನ್ನು ಉದ್ದೇಶಪೂರ್ವಕವಾಗಿ ಕೀಳರಿಮೆಯಿಂದ ನೋಡಲಾಗಿದೆ ಎಂದು ವಕೀಲ ಲಕ್ಷ್ಮಿನಾರಾಣ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ಗಳು ತುಂಬಾ ಅಸಭ್ಯವಾಗಿವೆ. ಕೋರ್ಟ್ ಅನ್ನು ರಾಜಕೀಯ ವೇದಿಕೆಯಾಗಿ ಮಾಡಿಕೊಂಡಿದ್ದು ನೋವಿನ ವಿಚಾರ. ಡಾಕ್ಟರ್ ಸುಧಾಕರ್ ಪ್ರಕರಣ ಸಂಬಂಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಹಿಂದೆ ಇತರೆ ನಾಯಕರು, ಸಂಸದರು ಇದ್ದಾರೆ. ನ್ಯಾಯಾಲಯವನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಕೋರ್ಟ್‌ನ ತೀರ್ಪುಗಳು ಪಕ್ಷಪಾತವಾಗಿರುವುದಿಲ್ಲ ಎಂದು ಅವರು ಹೇಳಿದ್ದಾರೆ.