ಕರ್ನಾಟಕ

karnataka

By

Published : Nov 19, 2020, 7:22 PM IST

ETV Bharat / jagte-raho

ಯೂಟ್ಯೂಬರ್ ವಿರುದ್ಧ ಬರೋಬ್ಬರಿ 500 ಕೋಟಿ ರೂ. ಮಾನಹಾನಿ ಪ್ರಕರಣ​ ದಾಖಲಿಸಿದ ಅಕ್ಷಯ್ ಕುಮಾರ್

ನವೆಂಬರ್ 17ರಂದು ಕಾನೂನು ಸಂಸ್ಥೆ ಐಸಿ ಲೀಗಲ್ ಮೂಲಕ ಕಳುಹಿಸಿದ ನೋಟಿಸ್‌ನಲ್ಲಿ ಅಕ್ಷಯ್​ ಕುಮಾರ್, ರಶೀದ್ ಸಿದ್ದಿಕಿ ಅವರು ತಮ್ಮ ಯೂಟ್ಯೂಬ್ ಚಾನೆಲ್ ಎಫ್‌ಎಫ್ ನ್ಯೂಸ್‌ನಲ್ಲಿ ತಮ್ಮ ವಿರುದ್ಧ ಹಲವು ಮಾನಹಾನಿಕರ ಮತ್ತು ಅವಹೇಳನಕಾರಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ದೂರಿದ್ದಾರೆ.

Akshay Kumar
ಅಕ್ಷಯ್ ಕುಮಾರ್

ಮುಂಬೈ:ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ತಮ್ಮ ವಿರುದ್ಧ ಸುಳ್ಳು ಮತ್ತು ಆಧಾರ ರಹಿತ ಆರೋಪಗಳನ್ನು ಮಾಡಿದ್ದಕ್ಕಾಗಿ ನಟ ಅಕ್ಷಯ್ ಕುಮಾರ್ ಬಿಹಾರ ಮೂಲದ ಯೂಟ್ಯೂಬರ್‌ ಮೇಲೆ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ನವೆಂಬರ್ 17ರಂದು ಕಾನೂನು ಸಂಸ್ಥೆ ಐಸಿ ಲೀಗಲ್ ಮೂಲಕ ಕಳುಹಿಸಿದ ನೋಟಿಸ್‌ನಲ್ಲಿ ಅಕ್ಷಯ್​ ಕುಮಾರ್, ರಶೀದ್ ಸಿದ್ದಿಕಿ ಅವರು ತಮ್ಮ ಯೂಟ್ಯೂಬ್ ಚಾನೆಲ್ ಎಫ್‌ಎಫ್ ನ್ಯೂಸ್‌ನಲ್ಲಿ ತಮ್ಮ ವಿರುದ್ಧ ಹಲವು ಮಾನಹಾನಿಕರ ಮತ್ತು ಅವಹೇಳನಕಾರಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ದೂರಿದ್ದಾರೆ.

ಬಾಲಿವುಡ್ ಸೂಪರ್ ‌ಸ್ಟಾರ್ ಯೂಟ್ಯೂಬರ್‌ನಿಂದ ಬೇಷರತ್ತಾಗಿ ಕ್ಷಮೆಯಾಚಿಸಲು ತಾಕೀತು ಮಾಡಿದ್ದಾರೆ. ಅವರ ವಿರುದ್ಧ ಪ್ರತ್ಯೇಕ ಮಾನಹಾನಿ ಪ್ರಕರಣದಲ್ಲಿ ಮುಂಬೈ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ದೂರು ಸಲ್ಲಿಕೆಯಾಗಿರುವುದು ತಿಳಿಯುತ್ತಿದ್ದಂತೆ ಯೂಟ್ಯೂಬರ್​ ಆ ಚಾನೆಲ್‌ನಿಂದ ಆಕ್ಷೇಪಾರ್ಹ ವಿಡಿಯೊಗಳನ್ನು ತೆಗೆದುಹಾಕಿದ್ದಾರೆ.

ಮಾನಹಾನಿಕರ ಮತ್ತು ಅವಹೇಳನಕಾರಿ ವಿಡಿಯೋಗಳ ಕಾರಣದಿಂದಾಗಿ ದೊಡ್ಡ ನಷ್ಟ ಉಂಟಾಗಿದೆ. ಇದರಲ್ಲಿ ಖ್ಯಾತಿ ಮತ್ತು ಸದ್ಭಾವನೆ ಕೂಡ ನಷ್ಟವಾಗಿದೆ. ಜನರನ್ನು ದಾರಿ ತಪ್ಪಿಸಲು ಮತ್ತು ಹಲವು ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಸುಳ್ಳು ಸುದ್ದಿ ಹರಡಲು ಯೂಟ್ಯೂಬ್​ ಡಿಜಿಟಲ್ ಮಾಧ್ಯಮ ಬಳಸಲಾಗಿದೆ ಎಂದು ಆರೋಪಿಸಿ 500 ಕೋಟಿ ರೂ. ಮಾನಹಾನಿ ಪ್ರಕರಣ ಸಿವಿಲ್​​ ಎಂಜಿನಿಯರ್ ರಶೀದ್​ ಸಿದ್ದಿಕಿ ವಿರುದ್ಧ ದಾಖಲಾಗಿದೆ.

ಒಂದು ವಿಡಿಯೋದಲ್ಲಿ ಸುಶಾಂತ್ ಅವರ 'ಎಂಎಸ್​ ಧೋನಿ: ದಿ ಅನ್ಟೋಲ್ಡ್​ ಸ್ಟೋರಿ' ಅಂತಹ ದೊಡ್ಡ ಸಿನಿಮಾದಲ್ಲಿ ನಟಿಸಿದ್ದು ಅಕ್ಷಯ್ ಕುಮಾರ್​ಗೆ ಅಸಮಾಧಾನ ತರಿಸುತ್ತಿತ್ತು ಎಂದು ಆರೋಪಿಸಲಾಗಿದೆ ಎಂಬ ಉಲ್ಲೇಖ ಸಹ ದೂರಿನಲ್ಲಿ ಮಾಡಿದ್ದಾರೆ.

ABOUT THE AUTHOR

...view details