ಕರ್ನಾಟಕ

karnataka

ETV Bharat / jagte-raho

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಆರೋಪ: ಉದ್ಯಮಿ ಪುತ್ರ ಸೇರಿ ನಾಲ್ವರ ವಿರುದ್ಧ ಎಫ್ಐಆರ್​ - ನಕಲಿ ದಾಖಲಿಸಿ ಸೃಷ್ಟಿಸಿ ಆಸ್ತಿ ಕಬಳಿಕೆ ಆರೋಪ

ರಘುನಾಥ್ ಪುತ್ರ ಕೆ.ಆರ್.ರೋಹಿತ್ ಎಂಬುವರು ಕೊಟ್ಟ ದೂರಿನ ಮೇರೆಗೆ ಡಿ.ಎ. ಶ್ರೀನಿವಾಸ್, ಎ.ದಾಮೋದರ್, ರಾಮಚಂದ್ರಯ್ಯ ಹಾಗೂ ಕೆ.ಪ್ರತಾಪ್ ಎಂಬುವರ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

FIR
ಎಫ್ಐಆರ್​

By

Published : Sep 27, 2020, 4:42 AM IST

ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ ಕೆ.ರಘುನಾಥ್ ಎಂಬುವರಿಗೆ ಸೇರಿದ್ದ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸಿದ ಆರೋಪದ ಮೇಲೆ ಡಿ.ಕೆ. ಆದಿಕೇಶವಲು ಪುತ್ರ ಡಿ.ಎ. ಶ್ರೀನಿವಾಸ್ ಸೇರಿ ನಾಲ್ವರ ವಿರುದ್ಧ ಹಲಸೂರುಗೇಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ರಘುನಾಥ್ ಪುತ್ರ ಕೆ.ಆರ್.ರೋಹಿತ್ ಎಂಬುವರು ಕೊಟ್ಟ ದೂರಿನ ಮೇರೆಗೆ ಡಿ.ಎ. ಶ್ರೀನಿವಾಸ್, ಎ. ದಾಮೋದರ್, ರಾಮಚಂದ್ರಯ್ಯ ಹಾಗೂ ಕೆ.ಪ್ರತಾಪ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ದಾಖಲೆ ಪ್ರತಿ

2019ರ ಮೇ ತಿಂಗಳಲ್ಲಿ ಕೆ. ರಘುನಾಥ್ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಶ್ರೀನಿವಾಸ್ ಮತ್ತು ದಾಮೋದರ್ ರಾಮಚಂದ್ರಯ್ಯ ಮತ್ತು ಪ್ರತಾಪ್‌ರನ್ನು ಸಾಕ್ಷಿದಾರರನ್ನಾಗಿ ಮಾಡಿ, ತಂದೆ ರಘುನಾಥ್ ಅವರೆ ನೋಂದಣಿ ಮಾಡಿಕೊಟ್ಟಿರುವಂತೆ ಆಸ್ತಿಯ ವಿಲ್‌ಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಅದನ್ನು ಬಳಸಿ ಬ್ಯಾಟರಾಯನಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ರೋಹಿತ್ ದೂರಿನಲ್ಲಿ ವಿವರಿಸಿದ್ದಾರೆ.

ನಕಲಿ ದಾಖಲೆ ಪ್ರತಿ

ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details