ಹುಬ್ಬಳ್ಳಿ:ಉತ್ತರ ಕರ್ನಾಟಕ ಅಭಿವೃದ್ದಿ ಸೇನೆ ಸಂಘಟನೆಯ ಅಧ್ಯಕ್ಷನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ವಿವೇಕಾನಂದ ಆಸ್ಪತ್ರೆಯ ಸಿಬ್ಬಂದಿಗೆ ಬೆದರಿಕೆ ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
'ಉತ್ತರ ಕರ್ನಾಟಕ ಅಭಿವೃದ್ದಿ ಸೇನೆ’ ಅಧ್ಯಕ್ಷನೆಂದು ಖಾಸಗಿ ಆಸ್ಪತ್ರೆಗೆ ಧಮ್ಕಿ, ಆರೋಪಿ ಬಂಧನ..! - ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ
ಉತ್ತರ ಕರ್ನಾಟಕ ಅಭಿವೃದ್ದಿ ಸೇನೆ ಸಂಘಟನೆಯ ಅಧ್ಯಕ್ಷ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ವಿವೇಕಾನಂದ ಆಸ್ಪತ್ರೆಯ ಸಿಬ್ಬಂದಿಗೆ ಬೆದರಿಕೆ ಹಾಕಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
!['ಉತ್ತರ ಕರ್ನಾಟಕ ಅಭಿವೃದ್ದಿ ಸೇನೆ’ ಅಧ್ಯಕ್ಷನೆಂದು ಖಾಸಗಿ ಆಸ್ಪತ್ರೆಗೆ ಧಮ್ಕಿ, ಆರೋಪಿ ಬಂಧನ..! accused of being the president of North Karnataka Development threat](https://etvbharatimages.akamaized.net/etvbharat/prod-images/768-512-6815450-12-6815450-1587034966570.jpg)
'ಉತ್ತರ ಕರ್ನಾಟಕ ಅಭಿವೃದ್ದಿ ಸೇನೆ’ ಅಧ್ಯಕ್ಷನೆಂದು ಖಾಸಗಿ ಆಸ್ಪತ್ರೆಗೆ ಧಮ್ಕಿ, ಆರೋಪಿ ಬಂಧನ..!
ಗಂಗಾಧರ ಪೆರೂರು ಎಂಬಾತನೇ ಬೆದರಿಕೆ ಹಾಕಿದ ವ್ಯಕ್ತಿ. ಏ.8 ರಂದು ಆಸ್ಪತ್ರೆಯ ಸಿಇಒ ರೂಂಗೆ ಎಂಟತ್ತು ಜನರ ಗುಂಪು ಕಟ್ಟಿಕೊಂಡು ಒಳಪ್ರವೇಶ ಮಾಡಿದ ಗಂಗಾಧರ, ನಾನು ಉತ್ತರ ಕರ್ನಾಟಕ ಅಭಿವೃದ್ದಿ ಸೇನೆ ಸಂಘಟನೆಯ ಅಧ್ಯಕ್ಷನಿದ್ದೇನೆ. ನನ್ನ ಕೆಲವು ಬೇಡಿಕೆ ಈಡೇರಿಸಿ, ಹಣವನ್ನು ಕೊಡಿ, ಇಲ್ಲವಾದರೆ ನಿಮ್ಮ ಆಸ್ಪತ್ರೆಯನ್ನು ಮುಚ್ಚಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಸಂಬಂಧ ಆಸ್ಪತ್ರೆಯ ಸಿಇಒ ರಾಹುಲ್ ಮುಂಗೇಕರ್ ಅವರು ಉಪನಗರ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.