ಬೆಂಗಳೂರು:ಕುಡಿದ ಮತ್ತಿನಲ್ಲಿ ರಾಡ್ನಿಂದ ಕಾರುಗಳ ಗ್ಲಾಸ್ ಒಡೆದು ಹುಚ್ಚಾಟ ನಡೆಸುತ್ತಿದ್ದ ಆರೋಪಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಕಾರುಗಳ ಗ್ಲಾಸ್ ಒಡೆಯುತ್ತಿದ್ದ ಕಿಡಿಗೇಡಿ ಬಂಧನ - ಬೆಂಗಳೂರು ಜಿಲ್ಲೆ ಸುದ್ದಿ
ಕಾರುಗಳ ಮಾಲೀಕರು ಕೆಂಗೇರಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಆರೋಪಿ ಎಸಗಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳು ದೊರಕಿದ್ದು, ಕಿಡಿಗೇಡಿಯನ್ನು ಬಂಧಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಕಾರುಗಳ ಗ್ಲಾಸ್ ಹೊಡೆಯುತ್ತಿದ್ದ ಕಿಡಿಗೇಡಿ ಬಂಧನ
ಕೆಂಗೇರಿಯ ಅಶೋಕ್ ಬಂಧಿತ ಆರೋಪಿಯಾಗಿದ್ದು, ಆಟೋ ಚಾಲಕನಾಗಿದ್ದ ಈತ ರಾತ್ರಿ ವೇಳೆ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಸೈಕೋಪಾತ್ನಂತೆ ವರ್ತಿಸುತ್ತಿದ್ದ. ರಾಡ್ ಹಿಡಿದು ಮನೆ ಮುಂದೆ ಪಾರ್ಕ್ ಮಾಡಿದ್ದ ಕಾರಿನ ಗ್ಲಾಸ್ ಒಡೆದು ಪುಂಡಾಟ ನಡೆಸುತ್ತಿದ್ದ. ಇದೇ ರೀತಿ 8 ಕಾರುಗಳ ಗ್ಲಾಸ್ ಒಡೆದು ದುಷ್ಕೃತ್ಯ ಎಸಗಿದ್ದ.
ಕಾರುಗಳ ಮಾಲೀಕರು ಕೆಂಗೇರಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಆರೋಪಿ ಎಸಗಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳು ದೊರಕಿದ್ದು, ಕಿಡಿಗೇಡಿಯನ್ನು ಬಂಧಿಸಿದ್ದಾರೆ.